fbpx
ಮನೋರಂಜನೆ

ಹಿಂದಿಯಲ್ಲಿ ದಾಖಲೆ ಬರೆದ ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾ !

ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ್ದೇ ಕ್ರೇಜ್. ಅಕ್ಷರಶಃ ಕೆಜಿಎಫ್ ಸಿನಿಮಾದ ಭರಾಟೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ . ಸಿನಿಮಾದಲ್ಲಿ ಪ್ರಶಾಂತ್ ನೀಲ್ ರವರ ಸೂಪರ್ ನಿರ್ದೇಶನಕ್ಕೆ, ರಾಕಿಂಗ್ ಸ್ಟಾರ್ ಯಶ್ ರವರ ಅಮೇಜಿಂಗ್ ಆಕ್ಟಿಂಗ್ ಗೆ, ಭುವನ್ ಗೌಡ ರವರ ವಂಡರ್ಫುಲ್ ಕ್ಯಾಮೆರಾ ವರ್ಕ್ ಗೆ ಮತ್ತು ರವಿ ಬಸರೂರು ರವರ ಮ್ಯೂಸಿಕ್ ಗೆ ಸಿನಿ ಪ್ರೇಮಿಗಳು ಮಾರು ಹೋಗಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದು 100 ಕೋಟಿ ಕ್ಲಬ್ ಸೇರಿದ ಕನ್ನಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಕೆಜಿಎಫ್ ಸಿನಿಮಾ ಇದೀಗ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿ 200 ಕೋಟಿ ಕ್ಲಬ್ ಸೇರಿತ್ತು.

ಒಟ್ಟಾರೆ ಇದುವರೆಗೂ ಕೆಜಿಎಫ್ ಕಲೆಕ್ಷನ್ ₹ 200 ಕೋಟಿ ರೂಪಾಯೀ ಎಂದು ಬಾಲಿವುಡ್‌ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಇತ್ತೀಚಿಗಷ್ಟೇ ಟ್ವೀಟ್ ಮಾಡಿದ್ದರು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ತರುಣ್ ಆದರ್ಶ್ ಕೆಜಿಎಫ್ ಸಿನಿಮಾ ಹಿಂದಿ ಭಾಷೆಯಲ್ಲಿ 40.39 ಕೋಟಿ ರುಪಾಯಿ ಗಳಿಕೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಕನ್ನಡ ಚಿತ್ರವೊಂದು ಬಾಲಿವುಡ್ ನಲ್ಲಿ ಈ ರೇಂಜಿಗೆ ಕಲೆಕ್ಷನ್ ಮಾಡುತ್ತಿರುವುದು ಇದೇ ಮೊದಲಾಗಿದ್ದು ಇನ್ನೂ ಬಾಹುಬಲಿ 2, 2.0, ಬಾಹುಬಲಿ ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಕ್ಷಿಣ ಭಾರತದ ನಾಲ್ಕನೇ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ ಭಾಜನವಾಗಿದೆ.

ಒಟ್ಟಿನಲ್ಲಿ ನಮ್ಮ ಕನ್ನಡ ಕೆಜಿಎಫ್ ಸಿನಿಮಾ ಹಿಂದಿಯಲ್ಲೂ ಇತಿಹಾಸ ಬರೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top