fbpx
ಸಮಾಚಾರ

ರಾಧಿಕಾಗೆ ಹೆರಿಗೆ ಮಾಡಿಸಿದ ಈ ವೈದ್ಯೆ ಚಂದನವನದ ಸ್ಟಾರ್ ನಟಿಯೊಬ್ಬಳ ತಾಯಿ- ಆ ನಟಿ ಯಾರು ಗೊತ್ತಾ?

ಕಳೆದ ತಿಂಗಳು ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣು ಮುದ್ದಾದ ಮಗುವೊಂದರ ಜನನವಾಗಿತ್ತು. ಮದುವೆಯಾದ ಎರಡನೇ ವರ್ಷದ ವಾರ್ಷಿಕೋತ್ಸದ ಸಂಭ್ರಮಕ್ಕೆ ಸರಿಯಾಗಿ ಯಶ್ ಮನೆಗೆ ಭಾಗ್ಯಲಕ್ಷ್ಮಿಯ ಆಗಮನವಾಗಿತ್ತು. ಇದನ್ನು ಕೇವಲ ಯಶ್​ ಮನೆ ಮಾತ್ರವಲ್ಲದೇ ಅಭಿಮಾನಿಗೆಲ್ಲರೂ ಮುದ್ದು ಮಗಳ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದ್ದರು, ತಮ್ಮ ನೆಚ್ಚಿನ ನಟನಟಿಯರು ಮೊದಲ ಭಾರಿಗೆ ಪೋಷಕರಾಗಿದ್ದನ್ನು ಸಂಭ್ರಮಿಸಿದ್ದರು.. ಈ ಸಂತಸಕ್ಕೆ ಕಾರಣರಾಗಿದ್ದವರಲ್ಲಿ ರಾಧಿಕಾಗೆ ಹೆರಿಗೆ ಮಾಡಿಸಿದ ವೈದ್ಯರೂ ಕೂಡ ಒಬ್ಬರು.

ಬೆಂಗಳೂರಿನ ಫೊರ್ಟಿಸ್​ ಆಸ್ಪತ್ರೆಯಲ್ಲಿ ರಾಧಿಕಾಗೆ ಡಾ. ಎಸ್​ ಸ್ವರ್ಣಲತಾ ಎಂಬುವವರು ಹೆರಿಗೆ ಮಾಡಿಸಿದ್ದರು. ಹೆರಿಗೆ ನಂತರದ ಶುಶ್ರೂಷೆಯನ್ನು ಕೂಡ ಸ್ವರ್ಣ ಲತಾ ಅವರೇ ಮಾಡಿದ್ದರು.. ಸ್ವರ್ಣ ಲತಾ ಅವರ ಸೇವೆಗೆ ಸ್ವತಃ ಯಶ್ ಮತ್ತು ರಾಧಿಕಾ ಅವರೇ ಮನಸೋತು ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದರು.. ಡಾ. ಸ್ವರ್ಣಲತಾ ಅವರ ಬಗ್ಗೆ ಇದೀಗ ಸಡನ್ನಾಗಿ ಹೇಳುತ್ತಿರುವುದು ಏಕೆ ಅಂತೀರಾ? ಮುಂದೆ

 

 

ಬೆಂಗಳೂರಿನ​​​ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾಗಿರುವ ಡಾ. ಸ್ವರ್ಣ ಲತಾ ಕನ್ನಡದ ಸ್ಟಾರ್ ನಟಿಯರ ಸಾಲಿಗೆ ಸೇರಲು ತುದಿಗಾಲಲ್ಲಿ ನಿಂತಿರುವ ನಟಿಯ ತಾಯಿ.. ಹೌದು ಡಾ.ಸ್ವರ್ಣಲತಾ ಅವರ ಮಗಳು ಕನ್ನಡದ ಎರಡು ಬಹುನಿರೀಕ್ಷಿತ​ ಸಿನಿಮಾಗಳ ನಾಯಕಿ.. ಚಂದನವನದಲ್ಲಿ ಭರವಸೆ ಮೂಡಿಸುತ್ತಾ ಇರುವ ಆ ಬಹು ಬೇಡಿಕೆಯ ನಟಿ ಶ್ರೀಲೀಲಾ..

‘ಕಿಸ್​’ ‘ಭರಾಟೆ’ ಚಿತ್ರಗಳ ನಾಯಕಿಯೇ ಸ್ವರ್ಣ ಲತಾ ಮಗಳು:
ಎಪಿ ಅರ್ಜುನ್ ನಿರ್ದೇಶನದ ಬಹು ನಿರೀಕ್ಷಿತ ‘ಕಿಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವವಳೇ ‘ಶ್ರೀಲೀಲಾ’. ಈಕೆ ಜನಪ್ರಿಯ ವೈದ್ಯೆ ಸ್ವರ್ಣ ಲತಾ ಅವರ ಮಗಳು.. ಮೊದಲ ಚಿತ್ರವಿನ್ನೂ ಬಿಡುಗಡೆಯಾಗುವುದಕ್ಕೂ ಮುನ್ನವೇ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಶ್ರೀಲೀಲಾ ಶ್ರೀಮುರಳಿ ಅಭಿನಯದ, ಭರ್ಜರಿ ಚೇತನ್​ ನಿರ್ದೇಶನದ ‘ಭರಾಟೆ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾಳೆ.

ಸದ್ಯ ದ್ವಿತೀಯ ಪಿಯು ಓದ್ತಾ ಇರೋ ಶ್ರೀಲೀಲಾ ತನ್ನ ಸೌಂದರ್ಯದಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದು ಭವಿಷ್ಯದಲ್ಲಿ ಸ್ಟಾರ್ ಹೀರೋಯಿನ್ ಆಗುವುದರಲ್ಲಿ ಎರಡು ಮಾತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top