fbpx
ಸಮಾಚಾರ

ನಟಿ ಸಿಂಧು ಲೋಕನಾಥ್ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ- ಡಿವೋರ್ಸ್​ಗೆ ಮುಂದಾದರೇ?

‘ಡ್ರಾಮಾ’, ‘ಯಾರೇ ಕೂಗಾಡಲಿ’, ‘ಲವ್ ಇನ್ ಮಂಡ್ಯ’ ‘ಪರಿಚಯ’ ‘ಐರಾವತ’ ಚಿತ್ರಗಳೂ ಸೇರಿದಂತೆ ಇನ್ನು ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿರುವ ನಟಿ ಸಿಂಧು ಲೋಕನಾಥ್ ಕಳೆದ ವರ್ಷ ತಾನೇ ಯಾವುದೇ ಸದ್ದು ಸುದ್ದಿಯಿಲ್ಲದೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು.. ಶ್ರೇಯಸ್‌ ಕೊಡಿಯಾಲ್‌ ಎಂಬುವವರನ್ನು ಮದುವೆಯಾಗಿದ್ದ ಸಿಂಧು ಇದೀಗ ತಮ್ಮ ಮದುವೆಯನ್ನು ಮುರಿದುಕೊಳ್ಳುವ ನಿರ್ಧಾರ ಮಾಡಿದ್ದಾಳೆ ಎನ್ನುವ ಸುದ್ದಿಯೊಂದು ಮೂಲಗಳಿಂದ ತಿಳಿದುಬಂದಿದೆ.

 

 

ಸದ್ಯ ಸಿಂಧು ತಮ್ಮ ಪತಿಯ ಮನೆಯಿಂದ ಹೊರ ಬಂದಿದ್ದು, ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದಾಳಂತೆ.. ಸದ್ಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಲು ಸಿಂಧು ನಿರ್ಧರಿಸಿದ್ದಾಳಂತೆ. ಆದರೆ ಸಿಂಧು ಲೋಕನಾಥ್ ಡಿವೋರ್ಸ್​ ನೀಡಲು ಮುಂದಾಗಿರುವುದರ ಹಿಂದಿರುವ ಅಸಲಿ ಕಾರಣ ಏನು ಎಂಬುದರ ಬಗ್ಗೆ ನಿಖರ ಮಾಹಿತಿಗಳು ತಿಳಿದು ಬಂದಿಲ್ಲ.

ಕರಾವಳಿ ಹುಡ್ಗ ಶ್ರೇಯಸ್ ಜೊತೆ ಲವ್ವಲ್ಲಿ ಬಿದ್ದದ್ದ ಸಿಂಧು ಮನೆಯವರನ್ನೆಲ್ಲಾ ಒಪ್ಪಿಸಿ 2017 ಆಗಸ್ಟ್ 27ರಂದು ಮಡಿಕೇರಿಯಲ್ಲಿ ಸರಳ ವಿವಾಹವಾಗಿದ್ದರು. ಮದುವೆಯ ನಂತರ ಚಿತ್ರರಂಗದಲ್ಲಿ ಅಷ್ಟೇನೂ ಕಾಣಿಸಿಕೊಂಡಿರದ ಸಿಂಧೂ ಹೀಗೊಂದು ದಿನ ಎಂಬ ಸಿನಿಮಾದಲ್ಲಿ ಮಾತ್ರ ನಟಿಸಿದ್ದರು. ಇನ್ನು ಕನ್ನಡ ಚಿತ್ರರಂಗದಲ್ಲಿ ಯಾವುದೇ ವಿವಾದಗಳಿಂದ ಹೆಚ್ಚು ಸುದ್ದಿಯಾಗದೇ ಡೀಸೆಂಟ್ ಹೀರೋಯಿನ್ ಎನಿಸಿಕೊಂಡಿರುವ ಸಿಂಧು ಅವರ ಸಾಂಸಾರಿಕ ಜೀವನದ ವಿಚಾರವಾಗಿ ಸುದ್ದಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top