fbpx
ಸಮಾಚಾರ

ರಶ್ಮಿಕಾ ಮಂದಣ್ಣ ಸಮಾಜಮುಖಿ ಕಾರ್ಯ- ಕಿರಿಕ್ ಹುಡ್ಗಿಯ ಸಮಾಜ ಸೇವೆಗೆ ಫ್ಯಾನ್ಸ್ ಮೆಚ್ಚುಗೆ.

ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಸಿನಿಮಾದಲ್ಲಿ ಸೊಂಟ ಬಳುಕಿಸೋಕೆ ಮಾತ್ರ ಲಾಯಕ್ಕು ಎನ್ನುವ ಮಾತಿದೆ ಆದ್ರೆ ಕನ್ನಡದ ನಟಿ ರಶ್ಮಿಕಾ ಮಾತ್ರ ತಾನು ಸಿನಿಮಾದಲ್ಲಿ ಮಾತ್ರ ನಾಯಕಿಯಲ್ಲ ನಿಜಜೀವನದಲ್ಲೂ ನಾಯಕಿ ಎಂಬುದನ್ನು ನಿರೂಪಿಸಿದ್ದಾಳೆ. ಏನಾದರೊಂದು ಎಡವಟ್ಟುಮಾಡಿಕೊಳ್ಳುವ ಮುಖಾಂತವರೋ ಅಥವಾ ಬಟ್ಟೆ ಸರಿಸಿ ಅಂಗಾಂಗ ಪ್ರದರ್ಶನದ ಮೂಲಕವೇ ಸದ್ದು ಮಾಡಲೆತ್ನಿಸುವ ಈಗಿನ ನಟಿಯರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಸಾಮಾಜಿಕ ಕಳಕಳಿಯ ಮನೋಭಾವವನ್ನು ಹೊಂದಿರೋ ನಟಿಯರೂ ಇದ್ದಾರೆ. ಅಂತಹವರಲ್ಲಿ ಕಿರಿಕ್ ಹುಡುಗಿ ಕೂಡ ಒಬ್ಬಳಾಗಿದ್ದಾಳೆ..

ಈ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ಜನರಿಗೆ ವಯಕ್ತಿಕವಾಗಿ ಚೆಕ್ ವಿತರಿಸುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದ ರಶ್ಮಿಕಾ ಇತ್ತೀಚಿಗೆ ಕೆರೆಗಳು ಮಲಿನವಾಗುತ್ತಿರುವುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಳು. ರಶ್ಮಿಕಾ ಇದೀಗ ಮತ್ತೊಮ್ಮೆ ಸಾಮಾಜಿಕ ಕಳಕಳಿ ಮೆರೆದಿದ್ದಾಳೆ..ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಗಳಲ್ಲೂ ಬ್ಯುಸಿಯಾಗಿರುವ ರಶ್ಮಿಕಾ ತಮ್ಮ ಬ್ಯುಸಿ ಶೆಡ್ಯೂಲ್ ನಡೆವೆಯೂ ಬಿಡುವು ಮಾಡಿಕೊಂಡು ಸಮಾಜ ಸೇವೆ ಮಾಡಿದ್ದಾಳೆ.

 

 

ರಶ್ಮಿಕಾ ತಾವೇ ಬಡ ಜನರಿಗೆ ರಸ್ತೆಯೊಂದರ ಬದಿ ನಿಂತು ಊಟ ಬಡಿಸಿದ್ದಾರೆ.. ನಾಕಾಣೆ ಸಹಾಯ ಮಾಡಿ ನೂರು ರೂಪಾಯಿ ಪ್ರಚಾರ ಪಡೆಯೋ ಈಗಿನ ಕಾಲದಲ್ಲಿ ಎಡಗೈಯಲ್ಲಿ ಮಾಡಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವ ಹಾಗೆಯೇ ರಶ್ಮಿಕಾ ಕೂಡ ತಾನು ಮಾಡಿದ ಕೆಲಸ ಯಾರಿಗೂ ಗೊತ್ತಾಗಬಾರದು ಎಂದು ಈ ವಿಷಯವನ್ನು ಎಲ್ಲೂ ಹೇಳಿಕೊಂಡಿರಲಿಲ್ಲ… ಆದರೆ, ರಶ್ಮಿಕಾ ಊಟ ಬಡಿಸುತ್ತಿದ್ದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವವರು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದ್ದಾರೆ.

ರಶ್ಮಿಕಾ ಫ್ಯಾನ್ಸ್ ಪೇಜ್ ಟ್ವಿಟ್ಟರ್ ನಲ್ಲಿ ಈ ಫೋಟೋಗಳನ್ನು ರಶ್ಮಿಕಾಗೆ ಟ್ಯಾಗ್ ಮಾಡಿದ್ದಾರೆ. ಫೋಟೋಗಳನ್ನು ನೋಡಿರುವ ರಶ್ಮಿಕಾ “ಇವೆಲ್ಲಾ ನಿಮಗೆ ಎಲ್ಲಿ ಸಿಕ್ಕಿದವು? ಇರಲಿ.. ಇವರೆಲ್ಲರೂ ಪ್ರತಿ ದಿನ ಬಿಸಿಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ನಾನು ಅವರನ್ನು ನೋಡುತ್ತಿದ್ದೆ. ಅವರೆಲ್ಲರ ಮನೆಯಲ್ಲಿಯೂ ಒಬ್ಬೊಬ್ಬ ಕ್ಯಾನ್ಸರ್ ರೋಗಿಗಳಿದ್ದಾರೆ.. ಅವರಿಗೆಲ್ಲಾ ನನ್ನ ಕೈಯಿಂದ ಸಾದ್ಯವಾಗುವ ಉಪಕಾರ ಮಾಡಬೇಕೆನ್ನಿಸಿತು.. ಹಾಗೆ ಇದೊಂದು ನನ್ನ ಪುಟ್ಟ ಸಹಾಯ” ಎಂದು ಬರೆದುಕೊಂಡಿದ್ದಾರೆ..

ಒಟ್ಟಿನಲ್ಲಿ ತೆರೆಮೇಲೆ ತಮ್ಮ ಥಳುಕು ಬಳುಕಿನ ಮೂಲಕವೇ ಚಪ್ಪಾಳೆ ಶಿಳ್ಳೆ ಗಿಟ್ಟಿಸಿಕೊಳ್ಳೋ ನಟಿಮಣಿಯರು ಇಂಥ ಸ್ಪೂರ್ತಿದಾಯಕ ಕಾಯಕಗಳಲ್ಲಿ ತೊಡಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರೆ ತಪ್ಪಾಗೊದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top