fbpx
ಮನೋರಂಜನೆ

ಕೆಜಿಎಫ್ ಚಿತ್ರ ನೋಡಿ ‘ಭೇಷ್’ ಅಂದ್ರು ಪಾಕಿಸ್ತಾನದ ಮಂದಿ.

ಪ್ರಶಾಂತ್ ನೀಲ್ ನಿರ್ದೇಶನದ , ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿರುವ ವಿಷಯ ನಮ್ಮೆಲ್ಲರಿಗೂ ಗೊತ್ತೇ ಇದೆ, ಗೊತ್ತಾಗುತ್ತಲೂ ಇದೆ. 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ಒಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಹೌದು,ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ ಪಾಕಿಸ್ತಾನದಲ್ಲೂ ಧೂಳೆಬ್ಬಿಸಲು ಸಜ್ಜಾಗಿದೆ. ಹೌದು, ಪಾಕಿಸ್ತಾನದ ಕೆಜಿಎಫ್ ಸಿನಿಮಾ ಆರಂಭವಾಗಿದ್ದು, ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ನಿನ್ನೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಈ ಮೂಲಕ ಪಾಕಿಸ್ತಾನದಲ್ಲಿ ರಿಲೀಸ್​ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ ತನ್ನ ಮುಡಿಗೇರಿಸಕೊಂಡಿದೆ.

ಕೆಜಿಎಫ್ ಸಿನಿಮಾದ ಬಿಡುಗಡೆಯ ಮುನ್ನ ಟ್ರೈಲರ್ ಗಳನ್ನೂ ನೋಡಿ ಫಿದಾ ಆಗಿದ್ದ ಪಾಕಿಸ್ತಾನದ ಅಭಿಮಾನಿಗಳು, ಕೆಜಿಎಫ್‌ ರಿಲೀಸ್ ಗಾಗಿ ಕಾಯುತ್ತಿದ್ದರು. ಅದರಂತೆ ಕೆಜಿಎಫ್‌ ಟ್ರೈಲರ್ ನೋಡಿದ ಪಾಕಿಸ್ತಾನದ ಯುವಕನೊಬ್ಬ ‘ಕೆಜಿಎಫ್‌​ ಟ್ರೈಲರ್’ ನೋಡಿ ‘ಇದೊಂದು ಗ್ರೇಟ್​ ಟ್ರೈಲರ್​’ ಮಾಮೂಲಿ ಸಲ್ಮಾನ್​ ಖಾನ್​ ಸಿನಿಮಾ ಇದಲ್ಲ. ಸಲ್ಮಾನ್​ ಸಿನಿಮಾಗೂ ಮೀರಿದ ಸಿನಿಮಾ. ನಾನಂತೂ ಖಂಡಿತಾ ಸಿನಿಮಾ ನೋಡ್ತೀನಿ’ ಅಂತಾ ಮನಸಾರೆ ಹಾಡಿ ಹೊಗಳಿ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದನು ಹೀಗಾಗಿ ಸಹಜವಾಗಿ ಕೆಜಿಎಫ್ ಸಿನಿಮಾದ ಬಗ್ಗೆ ಪಾಕಿಸ್ತಾನದಲ್ಲೂ ಕ್ರೇಜ್ ಶುರುವಾಗಿತ್ತು.

ಕೆಜಿಎಫ್‌ ಸಿನಿಮಾ ನೋಡಿ ಹೊರ ಬಂದ ಮಂದಿ ಪಾಕಿಸ್ತಾನಿ ಮಾಧ್ಯಮಗಳ ಮುಂದೆ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.. ಒಬ್ಬ ಪ್ರೇಕ್ಷಕ “ಸಿನಿಮಾ ಬಹಳ ಇಷ್ಟವಾಯಿತು. ನಟ ಯಶ್‌ ಅವರ ಅಭಿನಯ ಬಹಳ ಚೆನ್ನಾಗಿದೆ.. ಸಿನಿಮಾ ನೋಡುವಾಗ ಪ್ರತಿ ಕ್ಷಣ ಮುಂದೇನಾಗುತ್ತೋ ಎನ್ನುವ ಕುತೂಹಲ ಕಾಡುತ್ತಿತ್ತು.. ಕೆಜಿಎಫ್ ಸಿನಿಮಾ ನಮ್ಮ ಹೃದಯ ಗೆದ್ದು ಬಿಟ್ಟಿತು ಸಿನಿಮಾ. 2ನೇ ಚಾಪ್ಟರ್‌ ಯಾವಾಗ ಬರುತ್ತೋ ಕಾಯ್ತಿವಿ” ಎಂದು ಹೇಳಿದರು ಒಟ್ಟಿನಲ್ಲಿ ಏನೇ ಆಗಲಿ ಕನ್ನಡ ಸಿನಿಮಾವೊಂದು ಪಾಕಿಸ್ತಾನದಲ್ಲಿ ರಿಲೀಸ್ ಆಗಿರುವುದು ಹೆಮ್ಮೆಯ ವಿಚಾರವಲ್ಲದೆ ಮತ್ತೇನು ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top