fbpx
ಸಮಾಚಾರ

ಮೆಚ್ಚಿನ ನಟರ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವರೇ ಹುಷಾರ್! ಹಾಲಿನ ಅಭಿಷೇಕ ಮಾಡುವಾಗ ಕುಸಿದು ಬಿತ್ತು ಆಳೆತ್ತರದ ಅಜಿತ್ ಕಟೌಟ್ – ಐವರಿಗೆ ಗಂಭೀರ ಗಾಯ.

ಮೆಚ್ಚಿನ ನಟನ ಸಿನಿಮಾ ರಿಲೀಸ್ ಆದರೆ ಸಾಕು ಹಬ್ಬದಂತೆ ಅದನ್ನು ಸೆಲೆಬ್ರೆಟ್ ಮಾಡುವ ಅಭಿಮಾನಿಗಳಿಗೇನು ಕೊರತೆಯಿಲ್ಲ. ತಮ್ಮ ಮೆಚ್ಚಿನ ನಟನನ್ನು ಆರಾಧ್ಯದೈವ ಎಂಬಂತೆ ಕಾಣುವ ಕೆಲ ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ತೀರಾ ಅತಿರೇಖಕ್ಕೆ ಹೋಗಿಬಿಡುತ್ತದೆ ಎಂದರೆ ಬಹುಶಃ ತಪ್ಪಾಗಲಾರದು. ಇದೀಗ ಇಂತಹದೇ ಒಂದು ಹುಚ್ಚಾಟದ ಪರಿಣಾಮದಿಂದಾಗಿ ಕೆಲ ಅಭಿಮಾನಿಗಳು ಆಸ್ಪತ್ರೆಯ ಪಾಲಾಗಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಹೌದು, ತಮಿಳಿನ ಇಬ್ಬರು ದಿಗ್ಗಜ ನಟರಾದ ತಲೈವಾ ರಜನಿಕಾಂತ್ ಅಭಿನಯದ ‘ಪೇಟಾ’ ಮತ್ತೊಂದು ತಲಾ ಅಜಿತ್​ರ ‘ವಿಶ್ವಾಸಂ’ ಸಿನಿಮಾ ಎರಡು ಚಿತ್ರಗಳು ನಿನ್ನೆ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನವನ್ನೇನೋ ಕಾಣುತ್ತಿದೆ ಆದರೆ ವಿಪರ್ಯಾಸವೆಂಬಂತೆ ನಿನ್ನೆ ತಮ್ಮ ಮೆಚ್ಚಿನ ನಟ ತಲಾ ಅಜಿತ್​ರ ‘ವಿಶ್ವಾಸಂ’ ಚಿತ್ರವನ್ನು ಭರಮಾಡಿಕೊಳ್ಳಲು ಉತ್ಸುಹಕರಾಗಿದ್ದ ಅಭಿಮಾನಿಗಳು ಥಿಯೇಟರ್ ಗಳ ಮುಂದೆ ಅಜಿತ್ ರವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಿ ಆ ಪೈಕಿ ಒಂದು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲು ಸಿದ್ದರಾಗಿ ಕಟೌಟ್ ಮೇಲೆ ಹತ್ತಿದ್ದಾರೆ, ಅನೇಕ ಜನರು ಕಟೌಟ್ ಮೇಲೆ ಹತ್ತಿದ ಪರಿಣಾಮವಾಗಿ ಅತಿಯಾದ ಭಾರವನ್ನು ತಡೆಯಲಾರದ ಕಟೌಟ್ ದಿಢೀರ ನೆಲಕ್ಕೆ ಕುಸಿದು ಬಿದ್ದಿದ್ದು ಆಳೆತ್ತರದ ಕಟೌಟ್ ಮೇಲಿದ್ದ ಅಭಿಮಾನಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಕಟೌಟ್ ಮೇಲಿನಿಂದ ಬಿದ್ದ ಅಭಿಮಾನಿಗಳು ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿವೆ.

ತಮ್ಮ ಮೆಚ್ಚಿನ ನಟನ ಕಟೌಟ್ ಗಳಿಗೆ ವ್ಯರ್ಥವಾಗಿ ಹಾಲಿನ ಅಭಿಷೇಕ ಮಾಡುವ ಬದಲಿಗೆ ಯಾವುದಾದರೂ ಅಸಹಾಯಕರಿಗೋ ಅಥವಾ ಅನಾಥ ಮಕ್ಕಳಿಗೋ ಆ ಹಾಲನ್ನು ನೀಡಿದ್ದರೆ ಅಭಿಮಾನಿಗಳ ಅಭಿಮಾನಕ್ಕೆ ಒಂದು ಅರ್ಥವಿರುತ್ತಿತ್ತು ಆದರೆ ಅದನ್ನು ಬಿಟ್ಟು ಆಳೆತ್ತರದ ಕಟೌಟಿಗೆ ಹಾಲು ಅಭಿಷೇಕ ಮಾಡಲು ಹೋಗಿ ಆಪತ್ತನ್ನೇ ತಮ್ಮ ಮೈ ಮೇಲೆ ಎಳೆದುಕೊಂಡಿರುವ ಅಭಿಮಾನಗಳ ಹುಚ್ಚು ಅಭಿಮಾನದಿಂದಾಗಿ ಅವರ ಕುಟುಂಬದವರಿಗೆ ತೊಂದರೆ ಉಂಟಾಗಿರುವುದು ವಿಷಾದನೀಯವೇ ಸರಿ. ಅರ್ಥವಿರದ ಈ ಆಚರಣೆಗೆ ಅಭಿಮಾನ ಎಂದು ಹೆಸರಿಡುವುದಾದರೂ ಹೇಗೆ ಅಲ್ಲವೇ ?

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top