fbpx
ಸಮಾಚಾರ

‘ಮಾಜಿ ಪ್ರಧಾನಿ ದೇವೇಗೌಡರು ಭಸ್ಮಾಸುರ ಇದ್ದಂತೆ’ – ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್

“ಮಾಜಿ ಪ್ರಧಾನಿ ದೇವೇಗೌಡರು ಭಸ್ಮಾಸುರ ಇದ್ದಂತೆ. ಅವರು ಈಗಾಗಲೇ ಕಾಂಗ್ರೆಸ್ ತಲೆಯ ಮೇಲೆ ಕೈ ಇಟ್ಟಿದ್ದಾರೆ. ಅವರು ಕೈ ಇಟ್ಟರೆ ಕತೆ ಮುಗಿಯಿತು ಎಂದೇ ಅರ್ಥ” ಎಂದು ನೇರವಾದ ಹೇಳಿಕೆ ಕೊಡುವ ಮುಖಾಂತರ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಚುನಾವಣೆಗಳು ಹತ್ತಿರ ಬಂದರೆ ಸಾಕು ಒಂದು ಪಕ್ಷದ ರಾಜಕಾರಣಿಗಳು ಎದುರಾಳಿ ಪಕ್ಷದ ರಾಜಕಾರಣಿಗಳ ಮೇಲೆ ಹರಿಹಾಯುವುದು ಮಾಮೂಲಿ ಹೀಗಿರುವಾಗ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ಯತ್ನಾಳ್ ಮಾಜಿ ದೇವೇಗೌಡ ರವರನ್ನು ಭಸ್ಮಾಸುರ ನಿಗೆ ಹೋಲಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ಯತ್ನಾಳ್​, ದೇವೇಗೌಡರನ್ನ ಪ್ರಧಾನಿ ನರೇಂದ್ರ ಮೋದಿ‌ಯವರು ನಂಬಬಾರದು. ದೇವೇಗೌಡರಿಗೆ ರಾತ್ರಿ ವೇಳೆ ನಾಯಕರನ್ನು ಭೇಟಿಯಾಗುವ ಚಾಳಿ ಇದೆ. ದೇವೇಗೌಡರ ಆಟ ಬಲ್ಲವರಾರು? ಈ ಬಗ್ಗೆ ಬಿಜೆಪಿ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದಿದ್ದಲ್ಲದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಸ್ವತಃ ಕಾಂಗ್ರೆಸ್ಸಿಗರಿಗೂ ಮನವರಿಕೆಯಾಗಿದೆ. ಹಾಗಾಗಿ ಕಾಂಗ್ರೆಸ್​ನವರು ಜೆಡಿಎಸ್​​​ನವರ ಕಾಲಿಗೆ ಬೀಳುತ್ತಿದ್ದಾರೆ. ರಾಹುಲ್ ಗಾಂಧಿ, ದಿನೇಶ್ ಗುಂಡೂರಾವ್ ಕಾಂಗ್ರೆಸ್ ಪುಟಗೋಸಿಗಳು ಎಂದು ಬಸನಗೌಡ ಪಾಟೀಲ್ ರವರು ಕಿಡಿ ಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top