fbpx
ಸಮಾಚಾರ

ತೆರಿಗೆ ವಂಚನೆ ಪ್ರಕರಣ : ರಾಹುಲ್ ಮತ್ತು ಸೋನಿಯಾ ಗಾಂಧಿ ಗೆ ನೊಟೀಸ್ ಜಾರಿ ಮಾಡಿದ ಐಟಿ ಇಲಾಖೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2011-12ರಲ್ಲಿ ಸುಮಾರು 100 ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದ್ದು ಕುರಿತು ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಹೌದು, 2011-12ರಲ್ಲಿ ಸೋನಿಯಾ ಗಾಂಧಿ 155 ಕೋಟಿ ರೂಪಾಯಿ ಹಾಗೂ ರಾಹುಲ್ ಗಾಂಧಿ 155.4 ಕೋಟಿ ರೂಪಾಯಿ ಆದಾಯ ಘೋಷಿಸಿದ್ದರೂ ಆದರೆ ಇವರಿಬ್ಬರೂ ಘೋಷಿಸಿದ ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಎಂದು ಒಂದು ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿತ್ತು.

ಇಬ್ಬರ ಆದಾಯದ ಕುರಿತು ಮರು ಮೌಲ್ಯಮಾಪನ ನಡೆಸಿದ ಐಟಿ ಇಲಾಖೆಗೆ ಆದಾಯ ಘೋಷಣೆ ಮತ್ತು ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವ ವಿಚಾರ ಗಮನಕ್ಕೆ ಬಂದಿದೆ.

ಒಟ್ಟಿನಲ್ಲಿ ಐಟಿಯ ಮರುಮೌಲ್ಯಮಾಪನ ಆದೇಶದ ಪ್ರಕಾರ ಗಾಂಧಿ ಕುಟುಂಬವು 300 ಕೋಟಿ ರೂ. ಆದಾಯಕ್ಕೆ ತೆರಿಗೆ ವಂಚನೆ ಮಾಡಿದೆ. ಅವರ ತೆರಿಗೆ ಬಾಕಿಯು ಸುಮಾರು 100 ಕೋಟಿ ರೂ. ಇದೆ ಎಂದು ತಿಳಿದು ಬಂದಿದೆ.

2011-12ನೇ ಸಾಲಿನ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಆದಾಯ ತೆರಿಗೆಯ ಮರುಮೌಲ್ಯಮಾಪನ ನಡೆಸಿದ ಬಳಿಕ ಅವರ ವಿರುದ್ಧ ಡಿ.31ರಂದು ಆದೇಶ ಹೊರಡಿಸಲಾಗಿದ್ದು, ಅವರಿಗೆ ಆದೇಶದ ಪ್ರತಿಗಳನ್ನು ತಲುಪಿಸಲಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top