fbpx
ಸಮಾಚಾರ

ಬಂದ್ ಬಿಸಿಯಲ್ಲಿ ಹಸಿವು ತಡೆಯಲಾರದೆ ಒದ್ದಾಡುತ್ತಿದ್ದ ಮಕ್ಕಳಿಗೆ ನೆರವಾದ ಪೊಲೀಸ್ ಪೇದೆ !

ವರ್ಷದ ಆರಂಭದಲ್ಲೇ ಜನರಿಗೆ ಬಂದ್​ನ ಬಿಸಿ ಮುಟ್ಟಿದ್ದು ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿನ್ನೆ ಮತ್ತು ಮೊನ್ನೆ ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿ 12 ಬೇಡಿಕೆಗಳನ್ನೂ ಮುಂದಿಟ್ಟಿದ್ದವು.

ದೇಶವ್ಯಾಪಿ ಮುಷ್ಕರ ನಡೆದಿದ್ದರಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗಿತ್ತು , ಕೆಎಸ್​ಆರ್​ಟಿಸಿಯ 8,000, ಬಿಎಂಟಿಸಿಯ 6,300, ಈಶಾನ್ಯ ಭಾಗದ 4,000, ವಾಯುವ್ಯ ಸಾರಿಗೆ 4,300 ಬಸ್​ಗಳ ಸಂಚಾರ ಸ್ಥಗಿತಗೊಂಡಿತ್ತು . ಹಾಗೂ ಈಗಾಗಲೇ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ಸಹ ಕೊಟ್ಟಿತ್ತು.

ಇನ್ನೂ ಮಂಗಳವಾರ ಬಳ್ಳಾರಿ ಹಾಗೂ ಕೋಲಾರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ಇದನ್ನು ಹೊರತು ಪಡಿಸಿದರೆ ಬಹುತೇಕ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು . ಹೀಗಿರುವಾಗ ಬಂದ್ ವೇಳೆ ಹಸಿವು ತಾಳಲಾರದೆ ಇಬ್ಬರು ಪುಟಾಣಿಗಳು ಒದ್ದಾಡುವಾಗ ಅವರಿಗೆ ಪೊಲೀಸ್ ಪೇದೆಯೊಬ್ಬರು ಸಹಾಯ ಹಸ್ತ ಚಾಚುವ ದೃಶ್ಯ ಕಂಡು ಬಂದಿದ್ದು ಮಾನವೀಯತೆ ಮೆರೆದ ಪೊಲೀಸ್ ಪೇದೆಯ ಬಗ್ಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆ ಹರಿಸಿದ್ದು, ನಿಜಕ್ಕೂ ಪೋಲಿಸ್ ಪೇದೆ ಮಾಡಿದ ಕೆಲಸ ಶ್ಲಾಘನೀಯವಾಗಿದೆ ಎಂದು ಹದಿ ಹೊಗಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top