fbpx
ಸಮಾಚಾರ

ಸಂಕ್ರಾಂತಿ ಹಬ್ಬಕ್ಕೆ ಯಜಮಾನ ಚಿತ್ರದ ಹಾಡಿನ ಉಡುಗೊರೆ.

ಪ್ರೇಕ್ಷಕ ವಲಯದಲ್ಲಿ ನಾನಾ ಕಾರಣಗಳಿಂದ ವಿಪರೀತಿ ನಿರೀಕ್ಷೆ ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ `ಯಜಮಾನ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿಕೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.. ಚಿತ್ರದ ಟೈಟಲ್’ನಿಂದ ಹಿಡಿದು ತಾರಾಗಣದವರೆಗೆ ಎಲ್ಲದರಲ್ಲೂ ಕುತೂಹಲ ಮೂಡಿಸಿರುವ ಯಜಮಾನ ಚಿತ್ರತಂಡ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಇದೀಗ ಯಜಮಾನ ಚಿತ್ರತಂದಿಂದ ಬೊಂಬಾಟ್ ಸುದ್ದಿಯೊಂದು ಹೊರಬಿದ್ದಿದ್ದು ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.. ಹೌದು, ಜವಾರಿ ಜನವರಿ 15 ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.. ‘ಶಿವನಂದಿ’ ಎಂದು ಶುರುವಾಗುವ ಈ ಹಾಡಿಗೆ ಬಹದ್ದೂರ್ ಸಾಹಿತ್ಯ ಬರೆದಿದ್ದಾರೆ.

ಯಜಮಾನ ಬಗ್ಗೆ.
ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್’ಗೆ ನಾಯಕಿಯರಾಗಿ, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿದ್ದು ಧನಂಜಯ್ ಮತ್ತು ಸಿಂಗಂ ಖ್ಯಾತಿಯ ಥಾಕುರ್ ಅನೂಪ್ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top