fbpx
ಸಮಾಚಾರ

“ಇಂದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ” – ಕಿಂಗ್ ಕೊಹ್ಲಿ !

ಆಸೀಸ್ ನಾಡಿನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲುವನ್ನು ಸಾಧಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಮಂದಹಾಸವನ್ನು ಮೂಡಿಸಿದೆ.

ಹೀಗಿರುವಾಗ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದ ಭಾರತ ತಂಡಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಒಟ್ಟಿನಲ್ಲಿ ಗೆಲುವಿನ ಖುಷಿಯಲ್ಲಿರುವ ವಿರಾಟ್ ಸಿಡ್ನಿ ಟೆಸ್ಟ್ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು , “ಇಂದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ. ಇದು ನನ್ನ ಅತ್ಯುತ್ತಮ ಸಾಧನೆಯಲ್ಲಿ ಒಂದು ಎಂದು ವಿರಾಟ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ,2011ರ ವಿಶ್ವಕಪ್‌ ಸಂದರ್ಭದಲ್ಲಿ ನಾನು ತಂಡದಲ್ಲಿದ್ದೆ. 28 ವರ್ಷಗಳ ಬಳಿಕ ವಿಶ್ವಕಪ್‌ ಗೆದ್ದ ಭಾವುಕತೆ ತಂಡದ ಉಳಿದೆಲ್ಲ ಹಿರಿಯ ಆಟಗಾರರಲ್ಲಿ ಇತ್ತು. ಆದರೆ ಆ ಭಾವುಕತೆ ನನ್ನಲ್ಲಿರಲಿಲ್ಲ. ವೈಯಕ್ತಿಕವಾಗಿ ಈ ಸರಣಿ ಜಯ ನನ್ನ ವೃತ್ತಿಜೀವನದ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯ ನೆಲದಲ್ಲಿ ದೊರೆತ ಸರಣಿ ಗೆಲುವು ವಿಶ್ವಕಪ್‌ ಗೆದ್ದ ಖುಷಿಗಿಂತಲೂ ದೊಡ್ಡದು.” ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿ ದಿನವನ್ನು ಕೊಹ್ಲಿ ಅವಿಸ್ಮರಣೀಯ ದಿನವೆಂದು ಹೇಳಿಕೊಂಡಿದ್ದು, ಗೆಲುವನ್ನು ಎಂಜಾಯ್ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top