fbpx
ಸಮಾಚಾರ

“ಯೂ ಡೋಂಟ್ ನೋ ಕನ್ನಡ?,ಯು ಹಾವ್ ಟು ಲರ್ನ್” ಇಂಗ್ಲಿಷ್‌ನಲ್ಲಿ ಟಸ್ಸು ಪುಸ್ಸು ಎಂದ ಅಧಿಕಾರಿಗೆ ಮಾಜಿ ಸಿಎಂ ಫುಲ್ ಕ್ಲಾಸ್.

ಜನವರಿ 21ರಿಂದ ಬನಶಂಕರಿ ಜಾತ್ರಾ ಮಹೋತ್ಸವ ಆರಂಭವಾಗುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಮೊನ್ನೆ ದೇವಾಲಯಕ್ಕೆ ಭೇಟಿ ನೀಡಿ,ಕೈಗೊಂಡಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು. ಪ್ರವಾಸಿಗರೊಂದಿಗೂ ಮಾತುಕತೆ ನಡೆಸಿ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಕನ್ನಡ ಮಾತನಾಡದ ಸಿಬ್ಬಂದಿ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಪುರಾತತ್ವ ಇಲಾಖೆ ಸಿಬ್ಬಂದಿ ಎಸ್.ಕೆ ಭಗತ್ ಸೇರಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪುರಾತತ್ವ ಇಲಾಖೆ ಸಿಬ್ಬಂದಿ ಎಸ್.ಕೆ ಭಗತ್ ಸೇರಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಕನ್ನಡ ಕಲಿತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

 

“ಯು ಡೋಂಟ್ ನೊ ಕನ್ನಡ. ಯು ಆರ್ ಫ್ರಮ್ ಗವರ್ನಮೆಂಟ್ ಆಪ್ ಇಂಡಿಯಾ?. ವೈ ಯು ಆರ್ ನಾಟ್ ಲರ್ನ್ ಕನ್ನಡ?. ಹೌ ಲಾಂಗ್ ಯು ಹಿಯರ್?” ಎಂದು ಹೇಳಿದಾಗ ಅಧಿಕಾರಿ ‘ಒನ್ ಇಯರ್ ಸರ್’ ಎಂದು ಹೇಳಿದರು. ನಂತರ ‘ಪೀಪಲ್ ಹೂ ಆರ್ ಕಮಿಂಗ್ ಹಿಯರ್, ಯು ಮಸ್ಟ್ ಲರ್ನ್ ಕನ್ನಡ’ ಎಂದು ಸಿದ್ದರಾಮಯ್ಯ ಪಾಠ ಮಾಡಿದರು. ಆಗ ಅಧಿಕಾರಿ ‘ಯೆಸ್ ಸರ್, ಐ ಟ್ರೈಡ್ ಸರ್’ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ‘ನೋ ಕ್ವಶ್ಚನ್ ಆಫ್ ಟ್ರೈ, ಸ್ಟುಪಿಡ್’ ಎನ್ನುತ್ತಲೇ ಅಲ್ಲಿಂದ ನಿರ್ಗಮಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top