fbpx
ಸಮಾಚಾರ

ರಾಜಕುಮಾರ್ ಬಯೋಪಿಕ್ ನಲ್ಲಿ ಪುನೀತ್ ರಾಜಕುಮಾರ್?

ಇತ್ತೀಚಿಗಂತೂ ಸಿನಿಮಾ ರಂಗದಲ್ಲಿ ಕೇವಲ ಬಯೋಪಿಕ್ ಗಳದೇ ಕಾರುಬಾರು. ಹೌದು, ಒಂದಾದಮೇಲೆ ಒಂದರಂತೆ ಶ್ರೇಷ್ಠ ಸಾಧನೆಗೈದ ವ್ಯಕ್ತಿಗಳ ಜೀವನ ಚಿತ್ರವನ್ನು ತೆರೆಯೇ ಮೇಲೆ ತರುವ ಪ್ರಯತ್ನ ಎಲ್ಲಾ ಚಿತ್ರರಂಗದಲ್ಲೂ ಭರದಿಂದ ಸಾಗುತ್ತಿದೆ..ಮನಮೋಹನ್ ಸಿಂಗ್, ಕಪಿಲ್ ದೇವ್, ಸಚಿನ್, ಧೋನಿಯಿಂದ ಹಿಡಿದು ಮೊನ್ನೆಯ ಸಂಜಯ್ ದತ್ ಯವರೆಗೂ ಬಯೋಪಿಕ್ ಚಿತ್ರಗಳು ಬಂದಿವೆ ಇದೀಗ ಟಾಲಿವುಡ್ ಶ್ರೇಷ್ಠ ನಟ ಮತ್ತು ಆಂಧ್ರದ ಮಾಜಿ ಮುಖ್ಯಮಂತ್ರಿ NTR ಅವರ ಜೀವನಾಧಾರಿತ ಚಿತ್ರ ಕೂಡ ತೆರೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ.

ಬೆಂಗಳೂರಿನಲ್ಲಿ ತೆಲುಗಿನ ಎನ್‌ಟಿಆರ್ ಕಥಾನಾಯಕುಡು ಚಿತ್ರದ ಪ್ರಚಾರ ಕಾರ್ಯಕ್ರಮ ನಿನ್ನೆ ನಡೆಯಿತು. ಸಿನಿಮಾದ ಪ್ರಚಾರಕ್ಕೆ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪುನೀತ್​ ಹಾಗೂ ಯಶ್​ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಯ್ಯ ‘ಎನ್​ಟಿಆರ್​’ ಬಯೋಪಿಕ್​ ಸಿದ್ಧಗೊಂಡ ಮಾದರಿಯಲ್ಲೇ ಕನ್ನಡದಲ್ಲಿ ರಾಜ್​ಕುಮಾರ್​ ಜೀವನ ಸಿನಿಮಾ ಆಗಿ ರೂಪುಗೊಳ್ಳಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದರು..

“ತೆಲುಗಿನಲ್ಲಿ ಎನ್​ಟಿಆರ್​ ಹೇಗೋ ಹಾಗೆಯೇ ಕನ್ನಡದಲ್ಲಿ ರಾಜ್​ಕುಮಾರ್​. ಅವರ ಬಯೋಪಿಕ್​ ನಿರ್ಮಾಣಗೊಳ್ಳಬೇಕು. ರಾಜಕುಮಾರ್ ಜೀವನಾಧಾರಿತ ಚಿತ್ರದಲ್ಲಿ ಪುನೀತ್​ ರಾಜಕುಮಾರ್ ಅವರೇ ಅಭಿನಯಿಸಬೇಕು. ಇದನ್ನ ಅಣ್ಣಾವ್ರ ಅಭಿಮಾನಿಗಳೂ ಇಷ್ಟಪಡ್ತಾರೆ.” ಎಂದು ತಮ್ಮ ಮನದಾಳದ ಮಾತನ್ನು ಬಾಲಯ್ಯ ಹೇಳಿದರು.

ಪುನೀತ್ ಹೇಳಿದ್ದೇನು?
“ಬಾಲಕೃಷ್ಣ ಅವರು ಅವರ ತಂದೆ ಎನ್​​​ಟಿಆರ್ ಬಯೋಪಿಕ್ ನಲ್ಲಿ ನಟಿಸಿದ್ದಾರೆ. ಇದು ಅವರ ಬದುಕಿನಲ್ಲಿ ಅವಿಸ್ಮರಣೀಯ. ಮಗನೊಬ್ಬ ತನ್ನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರತೀಯ ಚಿತ್ರರಂಗದಲ್ಲೇ ಅಪರೂಪ.. ನನಗೂ ಕೂಡ ನನ್ನ ತಂದೆ ಜೇವನಾಧಾರಿತ ಚಿತ್ರದಲ್ಲಿ ನಟಿಸುವ ಆಸೆಯಿದೆ. ರಾಜ್‌ಕುಮಾರ್ ಅವರ ಜೀವನ, ಸಾಧನೆಯನ್ನು ಸಿನಿಮಾ ಮಾಡೋಕೆ ತುಂಬಾ ಕಷ್ಟ ಪಟ್ಟು ಕೆಲಸ ಮಾಡಬೇಕು. ಅವರ ಜೀವನವನ್ನ ತೆರೆಮೇಲೆ ತರಲು ಯಾರಾದರೂ ನಿರ್ದೇಶಕರು ಅಥವಾ ನಿರ್ಮಾಪಕರು ಮುಂದೆ ಬಂದರೆ ಖಂಡಿತ ಆ ಚಿತ್ರವನ್ನ ಮಾಡ್ತೀನಿ” ಎಂದು ಅಪ್ಪು ತಮಗೂ ತಮ್ಮ ತಂದೆಯ ಬಯೋಪಿಕ್ ನಲ್ಲಿ ನಟಿಸುವ ಆಸೆಯಿದೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top