fbpx
ಸಮಾಚಾರ

ಫುಟ್ಬಾಲ್ ನಲ್ಲಿ ಇತಿಹಾಸ ಸೃಷ್ಟಿಸಿದ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ : ಸ್ಟಾರ್ ಆಟಗಾರ ಮೆಸ್ಸಿ ದಾಖಲೆ ಉಡೀಸ್ !

ಎಎಫ್ ಸಿ ಏಷ್ಯಾಕಪ್ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡದ ಸೂಪರ್ ಸ್ಟಾರ್ ‘ಸುನೀಲ್ ಚೆಟ್ರಿ ‘ಎಲ್ಲರೂ ದಂಗಾಗುವಂತಹ ಸಾಧನೆಯನ್ನು ಮಾಡಿದ್ದಾರೆ. ಹೌದು, ಫುಟ್​ಬಾಲ್ ಲೋಕದ ದಂತಕತೆಯಾದ ‘ಲಿಯೊನೆಲ್​ ಮೆಸ್ಸಿ’ ಅವರ ದಾಖಲೆಯನ್ನು ನಮ್ಮ ಭಾರತದ ಹೆಮ್ಮೆಯ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ ಮುರಿದಿದ್ದಾರೆ.

ಹೌದು, ಅಲ್‌ ನಹಯಾನ್‌ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ 4-1 ಗೋಲುಗಳಿಂದ ಥಾಯ್ಲೆಂಡ್‌ ತಂಡವನ್ನು ಸೋಲಿಸಿ ಗೆಲುವಿನ ಕೇಕೆ ಹಾಕಿದ್ದು ಮುಖ್ಯವಾಗಿ ಈ ಪಂದ್ಯದಲ್ಲಿ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ 27ನೇ ಹಾಗೂ 46ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಒಟ್ಟಿನಲ್ಲಿ ಚೆಟ್ರಿ ತಮ್ಮ ವೃತ್ತಿ ಜೀವನದ 67ನೇ ಗೋಲ್ ದಾಖಲಿಸುವ ಮೂಲಕ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿಯ ದಾಖಲೆಯನ್ನು ಸರಿಗಟ್ಟಿದ್ದರೆ. ಈ ಹಿಂದೆ ಅರ್ಜೆಂಟೀನಾದ ಸ್ಟಾರ್ ಆಟಗಾರ ಮೆಸ್ಸಿಯೊಂದಿಗೆ 65 ಗೋಲುಗಳಿಂದ ಸಮಬಲ ಹೊಂದಿದ್ದ ಚೆಟ್ರಿ, ಥಾಯ್ಲೆಂಡ್ ವಿರುದ್ಧ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಾನು ಕೂಡ ವಿಶ್ವದ ಅತ್ಯುತ್ತಮ ಆಟಗಾರನೆಂದು ನಿರೂಪಿಸಿದ್ದಾರೆ.

2ನೇ ಸ್ಥಾನದಲ್ಲಿರುವ ಮೆಸ್ಸಿ ಇಲ್ಲಿಯವರೆಗೆ ಒಟ್ಟು 65 ಗೋಲುಗಳನ್ನೂ ದಾಖಲಿಸಿದ್ದಾರೆ. ಆದರೀಗ ಚೆಟ್ರಿ 67 ಗೋಲು ಗಳಿಸುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನೂ 85 ಗೋಲುಗಳನ್ನು ದಾಖಲಿಸಿರುವ ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಒಟ್ಟಿನಲ್ಲಿ ಇದುವರೆಗೂ ಭಾರತದ ಯಾವ ಫುಟ್ಬಾಲ್ ಆಟಗಾರನು ಮಾಡದ ಸಾಧನೆಯನ್ನು ಸುನೀಲ್ ಚೆಟ್ರಿ ಅವರು ಮಾಡಿರುವುದು ಭಾರತೀಯರೆಲ್ಲರಿಗೂ ಖುಷಿ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top