fbpx
ಸಮಾಚಾರ

ಐದಲ್ಲ ಹತ್ತಲ್ಲ ಬರೋಬ್ಬರಿ 23 ಭಾಷೆಗಳಲ್ಲಿ ಮೂಡಿಬರಲಿದೆ ಪಿಎಂ ಮೋದಿಯ ಬಯೋಪಿಕ್.

ಜೀವನಾಧಾರಿತ ಚಿತ್ರಗಳನ್ನು ತಯಾರಿಸುವುದರಲ್ಲಿ ಬಾಲಿವುಡ್ ಮಂದಿ ನಿಸ್ಸೀಮರು, ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಚಿತ್ರಗಳನ್ನು ತಯಾರಿಸುವುದು ಒಂದು ರೀತಿ ಟ್ರೆಂಡ್ ಆಗಿ ಬದಲಾಗಿಬಿಟ್ಟಿದೆ. ಕಪಿಲ್ ದೇವ್, ಸಚಿನ್, ಧೋನಿಯಿಂದ ಹಿಡಿದು ಮೊನ್ನೆಯ ಸಂಜಯ್ ದತ್ ಯವರೆಗೂ ಬಯೋಪಿಕ್ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಬಂದು ಮೋಡಿ ಮಾಡಿವೆ. ಈಗ ಆ ಸಾಲಿಗೆ ಮತ್ತೊಂದು ಚಿತ್ರ ಸೇರಿಕೊಳ್ಳುತ್ತಿದ್ದು ಭಾರತದ ಪ್ರಧಾನಿ ನರೇಂದ್ರ ಮೋಡಿ ಅವರ ಜೀವನಾಧಾರಿತ ಚಿತ್ರ ಬಾಲಿವುಡ್ ನಲ್ಲಿ ಇನ್ನೇನು ಸೆಟ್ಟೇರಲಿದೆ.

ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಮೋದಿ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು ಇತ್ತೀಚಿಗಷ್ಟೇ ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಫೈನಲ್​ ಆಗಿದ್ದರು. ಇದೀಗ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು 23 ಭಾಷೆಯಲ್ಲಿ ಪೋಸ್ಟರ್ ಗಳನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಿವೀಲ್ ಮಾಡಿದ್ದಾರೆ.ಇದು ಏಕಕಾಲಕ್ಕೆ ಬರೋಬ್ಬರಿ 23 ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಮೋದಿ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು ಇತ್ತೀಚಿಗಷ್ಟೇ ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಫೈನಲ್​ ಆಗಿದ್ದರು. ಇದೀಗ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು 23 ಭಾಷೆಯಲ್ಲಿ ಪೋಸ್ಟರ್ ಗಳನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಿವೀಲ್ ಮಾಡಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top