fbpx
ಸಮಾಚಾರ

ವಿಶ್ವಸಂಸ್ಥೆಯ ಉನ್ನತ ಹುದ್ದೆಗೆ ಏರಿದ ಮೈಸೂರು ಮೂಲದ ಮಹಿಳೆ !

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್​ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್​ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ಗೀತಾ ಗೋಪಿನಾಥ್ ರವರು ಇದೀಗ ವಿಶ್ವಸಂಸ್ಥೆ ಹಣಕಾಸು ನಿಧಿಯ 11ನೇ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಹೌದು, ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್​ ರವರ ತಂದೆ-ತಾಯಿ ಮೂಲತಃ ಕೇರಳದವರು. ಮೈಸೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ಗೀತಾ ಗೋಪಿನಾಥ್​ ರವರು ನಂತರ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ ಮುಖ್ಯವಾಗಿ 2016 ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗೀತಾ ಗೋಪಿನಾಥ್ ರವರು ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದಿದ್ದು ವಿಶೇಷ.

ಸ್ವತಃ ಐಎಂಎಫ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಕ್ರಿಸ್ಟೈನ್​ ಲಗಾರ್ಡ್ ರವರು ಗೀತಾ ಗೋಪಿನಾಥ್ ರವರ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದು ‘ಗೀತಾ ಗೋಪಿನಾಥ್ ರವರು ವಿಶ್ವದ ಅತ್ಯದ್ಭುತ ಆರ್ಥಿಕ ತಜ್ಞೆ’ಎಂದು ​ ಬಣ್ಣಿಸಿದ್ದಾರೆ.

ಈ ಬಗ್ಗೆ ಸಂದರ್ಶವೊಂದರಲ್ಲಿ ಮಾತನಾಡಿದ ಗೀತಾ ಗೋಪಿನಾಥ್ ರವರು ‘ ಹಣಕಾಸು ನಿಧಿಯ ಮುಂದಿರುವ ಸವಾಲುಗಳೇನು ಎಂಬುದು ನನಗೆ ಸರಿಯಾಗಿ ತಿಳಿದಿದೆ. ಜಾಗತೀಕರಣದಿಂದ ಹಿನ್ನಡೆಯಾಗಿರುವುದು ಸದ್ಯಕ್ಕೆ ನಮ್ಮ ಮುಂದಿರುವ ಗಂಭೀರ ವಿಷಯ’ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಮೈಸೂರು ಮೂಲದ ಮಹಿಳೆಯ ವಿಶ್ವಸಂಸ್ಥೆಯ ಉನ್ನತ ಹುದ್ದೆಯ ಚುಕ್ಕಾಣಿ ಹಿಡಿರುವುದು ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top