fbpx
ಸಮಾಚಾರ

ಸುವರ್ಣಾವಕಾಶ : ಟ್ವೀಟ್ ಗೆ ಮರು ಟ್ವೀಟ್ ಮಾಡಿ 6.4 ಲಕ್ಷ ರೂಗಳನ್ನು ನಿಮ್ಮದಾಗಿಸಿಕೊಳ್ಳಿ !

ಟ್ವೀಟ್ ಗೆ ಮರು ಟ್ವೀಟ್ ಮಾಡಿದರೆ 6.4 ಲಕ್ಷ ರೂಗಳ ಪಡೆಯಬಹುದಾ? ಏನಿದು ಅಂತ ಹೌಹಾರಬೇಡಿ. ಅಸಲಿಗೆ ಇದು ಅಚ್ಚರಿಯ ವಿಷಯವಾದರೂ ನಾವು ನೀವು ನಂಬಲೇ ಬೇಕಾದ ಸಂಗತಿ. ಅಂದಹಾಗೆ ಟ್ವೀಟ್ ಗೆ ಮರು ಟ್ವೀಟ್ ಮಾಡಿದರೆ ಯಾಕೆ ಅಷ್ಟು ಹಣ ಕೊಡುವರು?ಏಕೆ ಕೊಡುವರು? ಅಂತ ತಿಳಿಯಬೇಕಾದರೆ ಮುಂದೆ ಓದಿ…..

ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ್ ಸುತ್ತ 2023 ರಲ್ಲಿ ಪ್ರಯಾಣಿಸಲಿರುವ ಜಪಾನ್ ನ ಶತಕೋಟಿ ಒಡೆಯ ಮತ್ತು ಆನ್ಲೈನ್ ಫ್ಯಾಷನ್ ಉದ್ಯಮಿ ಯುಸಕು ಮೆಯೇಝೂವಾ ಇದೀಗ ಸಾರ್ವಜನಿಕರಿಗೆ ಕುಳಿತಲ್ಲೇ ಲಕ್ಷ ಗಳಿಸುವ ಅಥವಾ ಹಣ ಗಳಿಸುವ ಬಂಪರ್ ಸದವಕಾಶವನ್ನು ನೀಡಿದ್ದಾರೆ.

ಅಷ್ಟಕ್ಕೂ ಅದೇನಪ್ಪ ಅಂತ ಅವಕಾಶ ಅಂತೀರಾ ?

ಶತಕೋಟಿ ಒಡೆಯ ಯುಸಕು ಮೆಯೇಝೂವಾ ತಮ್ಮ ಟ್ವಿಟ್ಟರ್ ಖಾತೆಯನ್ನು ಯಾರು ಅನುಸರಿಸಿ ಅವರ ಟ್ವೀಟ್ ಗಳನ್ನೂ ಅತಿ ಹೆಚ್ಚು ಭಾರಿ ಮರು ಟ್ವೀಟ್ ಮಾಡುವರೋ ಅಂತಹ 100 ಮಂದಿ ಅದೃಷ್ಟಶಾಲಿಗಳಿಗೆ ಸುಮಾರು 6.4 ಲಕ್ಷರೂ ಗಳನ್ನೂ ನೀಡುವುದಾಗಿ ಅವರು ಘೋಷಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top