fbpx
ಸಮಾಚಾರ

ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಏಕಿರುತ್ತೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟರು ನಾದಬ್ರಹ್ಮ ಹಂಸಲೇಖ .

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ಹಲವರ ಮೆಚ್ಚಿನ ಸಂಗೀತ ಕಾರ್ಯಕ್ರಮವಾಗಿದ್ದು. ಅನೇಕ ದಿನಗಳಿಂದ ಪ್ರೇಕ್ಷಕರಿಗೆ ಈ ರಿಯಾಲಿಟಿ ಶೋ ಮನೋರಂಜನೆಯ ಹಬ್ಬದೂಟವನ್ನೇ ಬಡಿಸುತ್ತಿದೆ.

ಹೀಗಿರುವಾಗ ಕಳೆದ ಸಂಚಿಕೆಯ ಈ ಕಾರ್ಯಕ್ರಮದಲ್ಲಿ ಸ್ಪರ್ಧಿ ಹನುಮಂತನ ತಾಯಿ ಶೀಲವ್ವ ಅವರು ಲಾಂಬಾಣಿಗಳ ಉಡುಪನ್ನು ಅನುಶ್ರೀಗೆ ತಂದುಕೊಟ್ಟಿದ್ದರು ಹಾಗಾಗಿ
ನಿರೂಪಕಿ ಅನುಶ್ರೀ ಲಂಬಾಣಿ ಸಮುದಾಯದ ಮಹಿಳೆಯರ ಬಣ್ಣ ಬಣ್ಣದ ಉಡುಪನ್ನು ಧರಿಸಿದ್ದರು. ಈ ವೇಳೆ ನಿರೂಪಕಿ ಅನುಶ್ರೀ ಲಂಬಾಣಿ ವೇಷಭೂಷಣಗಳನ್ನು ಧರಿಸುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸಿದ್ದಾಳೆ ಎಂದು ನಾದಬ್ರಹ್ಮ ಹಂಸಲೇಖ ಅವರು ಖುಷಿ ವ್ಯಕ್ತಪಡಿಸಿದ್ದಲ್ಲದೆ ಆ ಸಮುದಾಯದ ಬಗ್ಗೆಯೂ ಮಾತನಾಡಿ ಲಂಬಾಣಿ ಸಮುದಾಯದ ಮಹಿಳೆಯರು ಧರಿಸಿರುವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚಾಗಿ ಕನ್ನಡಿಗಳನ್ನು ಯಾಕೆ ಬಳಸಲಾಗುತ್ತದೆ ? ಎಂಬ ಪ್ರಶ್ನೆಗೆ ಹಂಸಲೇಖ ರವರು ಉತ್ತರ ಸಹ ನೀಡಿದರು.

ಹಾಗಾದರೆ ಹಂಸಲೇಖಾ ರವರು ಏನೂ ಹೇಳಿದರು ಗೊತ್ತೇ? ಬನ್ನಿ ಅವರ ಮಾತುಗಳಲ್ಲೇ ಕೇಳೋಣ :

“ಇದೊಂದು ಸಮಾಜದಿಂದ ಅಲಕ್ಷಿಸಲ್ಪಟ್ಟ ಸಮುದಾಯವಾಗಿದ್ದು, ಇಂದು ಕನ್ನಡದ ಮನೆ ಮಗಳಾಗಿರುವ ಅನುಶ್ರೀ ಲಂಬಾಣಿ ವೇಷಭೂಷಣಗಳನ್ನು ಧರಿಸುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸಿದ್ದಾಳೆ. ಈ ಸಮುದಾಯದವರು ಪತ್ತೆದಾರಿ, ಗೂಢಚರ್ಯೆ ಮತ್ತು ಸುದ್ದಿಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರವಾನಿಸುವ ಕೆಲಸ ಮಾಡುತ್ತಿದ್ದರು. ಈ ಸಮುದಾಯದ ಮಹಿಳೆಯರು ಸ್ಫುರದ್ರೂಪಿಗಳು. ಬೇರೆ ಹುಡುಗರು ಹತ್ತಿರಕ್ಕೆ ಬಂದು ಅವರ ಮುಖವನ್ನು ಉಡುಪಿನಲ್ಲಿರುವ ಕನ್ನಡಿಯಲ್ಲಿ ನೋಡಿ ನಾನು ಈಕೆಗೆ ಸರಿಸಾಟಿ ಇಲ್ಲ ಅಂತ ವಾಪಾಸ್ ಹೋಗು ಅಂತಾ ಕನ್ನಡಿಗಳು ಹೇಳುತ್ತವೆ. ಹಾಗಾಗಿ ಮಹಿಳೆಯರ ವೇಷ-ಭೂಷಣಗಳಲ್ಲಿ ಕನ್ನಡಿಯನ್ನು ಬಳಸಲಾಗುತ್ತದೆ. ಈ ಸಮುದಾಯದಲ್ಲಿ ಮಹಿಳೆಯರು ಹೆಚ್ಚು ಬಲಶಾಲಿಗಳು. ಎಂತಹ ಹೋರಾಟಕ್ಕೂ ಸಿದ್ಧವಾಗಿರುತ್ತಾರೆ” ಎಂದು ಹಂಸಲೇಖ ರವರು ಲಂಬಾಣಿ ಸಮುದಾಯದ ಹಿರಿಮೆ ಗರಿಮೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top