fbpx
ಸಮಾಚಾರ

ನಾಳೆ ನಾಡಿದ್ದು ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ರಜೆ ಇರುತ್ತಾ?

ವರ್ಷದ ಆರಂಭದಲ್ಲೇ ಜನರಿಗೆ ಬಂದ್​ನ ಬಿಸಿ ಮುಟ್ಟಲಿದ್ದು ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8 ಮತ್ತು 9ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿವೆ. ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿದ್ದು, 12 ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9 ರಂದು ಬೀದಿಗಿಳಿಯಲಿವೆ.

ದೇಶವ್ಯಾಪಿ ಮುಷ್ಕರ ನಡೆಯಲಿದ್ದು ಕೆಎಸ್​ಆರ್​ಟಿಸಿ, ಬಿಎಂಟಿಸಿ, ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಕೆಎಸ್​ಆರ್​ಟಿಸಿಯ 8,000, ಬಿಎಂಟಿಸಿಯ 6,300, ಈಶಾನ್ಯ ಭಾಗದ 4,000, ವಾಯುವ್ಯ ಸಾರಿಗೆ 4,300 ಬಸ್​ಗಳ ಸಂಚಾರ ಸ್ಥಗಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬುಧವಾರ ಸಂಜೆ ಐದು ಗಂಟೆಯವರೆಗೂ ಬಂದ್ ನಡೆಯಲಿದ್ದು, ಈಗಾಗಲೇ ಮೋದಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ಕೊಟ್ಟಿದೆ.

ಶಾಲಾ ಕಾಲೇಜುಗಳಿಗೆ ರಜೆ ಇದ್ಯಾ?
ಮಕ್ಕಳ ಭದ್ರತೆ ಮತ್ತು ರಕ್ಷಣೆ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಪ್ರೈವೇಟ್ ಸ್ಕೂಲ್ ಅಸೋಸಿಯೇಷನ್ ಶಶಿಕುಮಾರ್ ಹೇಳಿದ್ದಾರೆ. ಮಕ್ಕಳ ಸುರಕ್ಷತೆ ಮತ್ತು ಅನಾನುಕೂಲ ಎದುರಾಗಲಿದೆ. ಈ ನಿಟ್ಟಿನಲ್ಲಿ ರಜೆ ನೀಡಲಾಗುತ್ತದೆ ಎಂದಿದ್ದಾರೆ.

ಬಂದ್ ಕರೆ ನೀಡಲು ಕಾರಣವೇನು?
ಮೋಟಾರು ವಾಹನ ತಿದ್ದುಪಡಿ ಮಸೂದೆ -2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್‍ಗೆ ಕರೆ ಮಾಡಲಾಗಿದೆ.

ಏನಿರುತ್ತೆ?
ತುರ್ತು ಚಿಕಿತ್ಸೆ, ಮೆಡಿಕಲ್ ಸ್ಟೋರ್, ಅಗತ್ಯ ವಸ್ತುಗಳಾದ ಪೇಪರ್, ಹಾಲು, ತರಕಾರಿ,ಸಾರಿಗೆ ಸೇವೆ, ಮೆಟ್ರೋ ಸಾಮಾನ್ಯವಾಗಿ ಬಂದ್ ಸಮಯದಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ಆಸ್ಪತ್ರೆಗಳು
ವೈದ್ಯಕೀಯ ಸೇವೆಗಳು
ಆಯಂಬುಲೆನ್ಸ್ ಸೇವೆಗಳು
ಔಷಧಿಗಳು, ಮೆಡಿಕಲ್ ಶಾಪ್ ಗಳು ತೆರೆದಿರುತ್ತವೆ.
ಎಂದಿನಂತೆ ಹಾಲು ಮತ್ತು ದಿನಪತ್ರಿಗಳು ಲಭ್ಯ
ಇನ್ನಿತರೆ ತುರ್ತು ಸೇವೆಗಳು ಲಭ್ಯವಿರುತ್ತವೆ.
. ನಮ್ಮ ಮೆಟ್ರೋ ಮತ್ತು ರೈಲು ಸೇವೆ ಎಂದಿನಂತೆ ಇರಲಿದೆ. ಎಷ್ಟು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂಬುದು ಸೋಮವಾರ ಖಚಿತವಾಗಲಿದೆ.

ಯಾವುದೆಲ್ಲಾ ಇರಲ್ಲ?
ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್, ಖಾಸಗಿ ಬಸ್ ಸೇವೆ.
ಆಟೋ, ಓಲಾ-ಊಬರ್, ಖಾಸಗಿ ಶಾಲೆಗಳ ವಾಹನಗಳು, ಐಟಿ-ಬಿಟಿ ವಾಹನ
ಸರ್ಕಾರಿ ಶಾಲಾ ಕಾಲೇಜು, ಖಾಸಗಿ ಶಾಲಾ ಕಾಲೇಜುಗಳು.
ಸರ್ಕಾರಿ ಕಚೇರಿ, ಬ್ಯಾಂಕುಗಳು, ಗಾರ್ಮೆಂಟ್ಸ್ .
ಶಾಪಿಂಗ್ ಮಾಲ್
ಬೀದಿ ಬದಿ ವ್ಯಾಪಾರ, ಅಂಗಡಿಗಳು, ಹೋಟೆಲ್.
ಚಿತ್ರಮಂದಿರಗಳು ಹಾಗೂ ಮಾಲ್ ಪ್ರದರ್ಶನದ ಬಗ್ಗೆ ನಾಳೆ ನಿರ್ಧಾರವಾಗಲಿದೆ.
ವಾಣಿಜ್ಯ ಮಾರುಕಟ್ಟೆ ವಹಿವಾಟುಗಳು ಸ್ಥಗಿತಗೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top