fbpx
ಭವಿಷ್ಯ

ಹಣಕಾಸಿನ ಸಮಸ್ಯೆಯಿಂದ ಹೊರಬರಬೇಕು ಅಂದ್ರೆ ಮಂಗಳವಾರದ ದಿನ ತಪ್ಪದೆ ಈ ಪರಿಹಾರ ಮಾಡ್ಕೊಳ್ಳಿ

ಋಣ ಬಾಧೆಯಿಂದ ಹೊರಬರಲು ಈ ಪ್ರಯತ್ನವನ್ನು ಮಾಡಿ ನೋಡಿ.
ನಿತ್ಯ ಜೀವನದಲ್ಲಿ ತಮ್ಮ ನಿತ್ಯ ಅಗತ್ಯಕ್ಕೆ ಬೇಕಾದ ಸಂಪಾದನೆ ಇಲ್ಲದೆ ಕೆಲವರು ಅಗತ್ಯತೆಗೆ ತಕ್ಕಂತೆ ಸಾಲವನ್ನು ಮಾಡಿ ಆದಕ್ಕೆ ಬಡ್ಡಿಗಳನ್ನು ಕೂಡ ಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ.ಹಾಗಾದರೆ ಇಂತಹ ಸಮಸ್ಯೆಗಳು ದೂರವಾಗಬೇಕೆಂದರೆ ಪ್ರತಿ ಮಂಗಳವಾರ ಹೀಗೆ ಮಾಡಿದರೆ ಸಾಲುಗಳೆಲ್ಲ ತೊಲಗಿ ಹೋಗಿ ಅಷ್ಟೈಶ್ವರ್ಯಗಳನ್ನು ಪಡೆಯಬಹುದು. ಮಂಗಳವಾರದ ದಿನ ಏನು ಮಾಡಬೇಕೆಂದು ಈಗ ನಾವು ತಿಳಿದುಕೊಳ್ಳೋಣ.

 

 

 

ಮಂಗಳವಾರಕ್ಕೆ ಅಧಿಪತಿ ಕುಜಗ್ರಹ ಅಂದರೆ ಅಂಗಾರಕ. ಈತನು ಋಣಕ್ಕೆ ಅಧಿಪತಿಯಾಗಿದ್ದಾನೆ. ಹಾಗೆಯೇ ಶತ್ರುಗಳ ಅಧಿಪತಿ ಸಹ ಕುಜ .ನಾವು ಬೇರೆಯವರಿಗೆ ಎಷ್ಟೆ ಒಳ್ಳೆಯದನ್ನೇ ಬಯಸಿದರು, ಅವರು ಮಾತ್ರ ನಮ್ಮ ಪತನವನ್ನು ಬಯಸುತ್ತಾರೆ. ಇದಕ್ಕೆ ಕಾರಣ ಅಂಗಾರಕ ಗ್ರಹ ಇದನ್ನೆಲ್ಲಾ ನಾವು ದೂರ ಮಾಡಿಕೊಳ್ಳಬೇಕೆಂದರೆ ಪ್ರತಿ ಮಂಗಳವಾರ ದಿನಗಳಲ್ಲಿ ಬೇಗನೆ ಎದ್ದು ತಲೆ ಸ್ನಾನವನ್ನು ಮಾಡಿ ಅಂಗಾರಕನಿಗೆ ಇಷ್ಟವಾದ ಕೆಂಪು ಬಣ್ಣದ ವಸ್ತ್ರವನ್ನು ಧರಿಸಬೇಕು. ನಂತರ ಕೆಂಪು ಬಣ್ಣದ ಕುಂಕುಮವನ್ನು ಧಾರಣೆ ಮಾಡಬೇಕು.

ಸುಬ್ರಹ್ಮಣ್ಯ ಸ್ವಾಮಿಗೆ ಪಾನಕವನ್ನು ನೈವೇದ್ಯವನ್ನಾಗಿ ಅರ್ಪಿಸಿ, ಭಕ್ತಿಯಿಂದ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಋಣಬಾಧೆ ದೂರವಾಗುತ್ತದೆ. ಹಾಗೆಯೇ ಇದರ ಜೊತೆ ಶತ್ರುಬಾಧೆ ಸಹ ದೂರವಾಗುತ್ತದೆ. ಹೀಗೆ ಈ ವಿಧವಾಗಿ ಪೂಜಿಸುವುದರಿಂದ ಅಂಗಾರಕನ ಅನುಗ್ರಹ ಪಡೆಯಬಹುದು ಮತ್ತು ಶತ್ರುಗಳು ಸಹ ಮಿತ್ರರಾಗುತ್ತಾರೆ.ಆದ್ದರಿಂದ ಮಂಗಳವಾರದ ದಿನ ಅಂಗಾರಕನಿಗೆ ದೀಪಾರಾಧನೆ ಮಾಡಿ, ನವ ಗ್ರಹಗಳಿಗೆ ಪ್ರದಕ್ಷಿಣೆ ಹಾಕಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರೆ ಸಾಕು ಸಕಲ ದೋಷಗಳು ದೂರವಾಗಿ ಅಷ್ಟೈಶ್ವರ್ಯಗಳು ಸಿದ್ಧಿಯಾಗುತ್ತವೆ ಎಂದು ಪಂಡಿತರು ಹೇಳುತ್ತಾರೆ.ಕುಜ ದೋಷ ದೂರವಾಗಲು ಈ ಮಂತ್ರಗಳನ್ನು ಜಪಿಸಿ.“ಓಂ ಕಾರ್ತಿಕೇಯಾಯ ವಿದ್ಮಹೆ, ವಲ್ಲಿನಾಥಾಯ ಧೀಮಹಿ, ತನ್ನೋ ಸ್ಕಂದ ಪ್ರಚೋದಯಾತ್”“ಓಂ ಅಂಗಾರಕಾಯ ವಿದ್ಮಹೆ, ಶಕ್ತಿ ಹಸ್ಥಾಯ ಧೀಮಹಿ, ತನ್ನೋ ಕುಜ ಪ್ರಚೋದಯಾತ್”.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top