fbpx
ಕ್ರಿಕೆಟ್

ದಾಖಲೆಗಳ ಸರದಾರನ ಮುಡಿಗೇರಿತು ಮತ್ತೊಂದು ದಾಖಲೆ : ಆಸೀಸ್‌ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ!

ದಾಖಲೆಗಳ ಸರ್ದಾರನೆಂದೇ ಖ್ಯಾತಿ ಗಳಿಸಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ‘ವಿರಾಟ್ ಕೊಹ್ಲಿ’ ಮುಟ್ಟಿದೆಲ್ಲಾ ಚಿನ್ನವೇ. ಪ್ರತಿ ಮ್ಯಾಚಿನಲ್ಲೂ ಅತ್ಯದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಹೆಳೆಯ ದಾಖಲೆಗಳನ್ನು ಸರಿಗಟ್ಟಿ ಹೊಸ ದಾಖಲೆಯನ್ನು ಸೃಷ್ಟಿಸುವ ವಿರಾಟ್ ಕೊಹ್ಲಿ ಒಬ್ಬ ಅಪ್ರತಿಮ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ.

ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿರುವ ವಿರಾಟ್ ಕೊಹ್ಲಿ ಇದೀಗ ಆಸ್ಟ್ರೇಲಿಯಾದ ನೆಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹೌದು, ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತದ ಮೊತ್ತ ಮೊದಲ ನಾಯಕ ಎಂಬ ದಾಖಲೆಯನ್ನು ವಿರಾಟ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ

ಅಂದಹಾಗೆ ಭಾರತ ತಂಡ 1947-48ರಲ್ಲಿ ಲಾಲಾ ಅಮರನಾಥ್‌ ಅವರ ಸಾರಥ್ಯದಲ್ಲಿ ಮೊದಲ ಬಾರಿ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆದಾದ ಮೇಲೆ ಇಲ್ಲಿಯ ವರೆಗೆ ಕಾಂಗರೂ ನಾಡಲ್ಲಿ ಭಾರತ ಯಾವ
ಟೆಸ್ಟ್ ಸರಣಿಯನ್ನು ಗೆದ್ದಿರಲಿಲ್ಲ .ಆದರೆ ಇದೀಗ ಸುದೀರ್ಘ ಏಳು ದಶಕಗಳ ಕಾಯುವಿಕೆಯ ಬಳಿಕ ಆಸೀಸ್ ನೆಲದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಈ ದಾಖಲೆ ರಚಿತವಾಗಿರುವುದು ವಿಶೇಷವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top