fbpx
ಸಮಾಚಾರ

ರಿಲೀಸ್ ಆಯ್ತು ಪಿಎಂ ಮೋದಿ ಜೀವನಾಧಾರಿತ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್.

ಜೀವನಾಧಾರಿತ ಚಿತ್ರಗಳನ್ನು ತಯಾರಿಸುವುದರಲ್ಲಿ ಬಾಲಿವುಡ್ ಮಂದಿ ನಿಸ್ಸೀಮರು, ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಚಿತ್ರಗಳನ್ನು ತಯಾರಿಸುವುದು ಒಂದು ರೀತಿ ಟ್ರೆಂಡ್ ಆಗಿ ಬದಲಾಗಿಬಿಟ್ಟಿದೆ. ಕಪಿಲ್ ದೇವ್ ಯಿಂದ ಹಿಡಿದು ಮೊನ್ನೆಯ ಧೋನಿಯವರೆಗೂ ಬಯೋಪಿಕ್ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಬಂದು ಮೋಡಿ ಮಾಡಿವೆ. ಈಗ ಆ ಸಾಲಿಗೆ ಮತ್ತೊಂದು ಚಿತ್ರ ಸೇರಿಕೊಳ್ಳುತ್ತಿದ್ದು ಭಾರತದ ಪ್ರಧಾನಿ ನರೇಂದ್ರ ಮೋಡಿ ಅವರ ಜೀವನಾಧಾರಿತ ಚಿತ್ರ ಬಾಲಿವುಡ್ ನಲ್ಲಿ ಇನ್ನೇನು ಸೆಟ್ಟೇರಲಿದೆ.

ಮೋದಿಯವರ ಜೀವನಾಧಾರಿತ ಚಿತ್ರದಲ್ಲಿ ಮೋದಿ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು ಇತ್ತೀಚಿಗಷ್ಟೇ ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಫೈನಲ್​ ಆಗಿದ್ದರು. ಇದೀಗ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು 23 ಭಾಷೆಯಲ್ಲಿ ಪೋಸ್ಟರ್ ಗಳನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಿವೀಲ್ ಮಾಡಿದ್ದಾರೆ.

ಚಿತ್ರ ಮುಂದಿನ ವರ್ಷ ಪ್ರಾರಂಭದಲ್ಲಿ ಸೆಟ್ಟೇರುತ್ತಿದ್ದು ಮೋದಿ ಟೀ ಮಾರುತ್ತಿದ್ದರು ಎಂದು ಹೇಳಲಾಗುತ್ತಿರುವ ಘಟನೆಯಿಂದ ಪ್ರಸ್ತುತ ಕಾಲಘಟ್ಟದವರೆಗೆ ಮೋದಿ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನ್ನು ತೆರೆಯ ಮೇಲೆ ಮೂಡಿಸುತ್ತಾರಂತೆ.

ಈ ಹಿಂದೆ ಮೇರಿಕೋಮ್,​ ಕ್ರಿಶ್-3 ಅಂಥಾ ಸಿನಿಮಾಗಳನ್ನ ನಿರ್ದೇಶಿಸಿದ್ದ ಒಮಂಗ್​ ಕುಮಾರ್​ ಅವ್ರೆ ಮೋದಿ ಬಯೋಪಿಕ್ ಸಿನಿಮಾವನ್ನು ಕೂಡ ನಿರ್ದೇಶಿಸುತ್ತೀದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ ಗುಜರಾತ್​, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ನಡೆಸಲು ಯೋಜಿಸಲಾಗಿದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top