fbpx
ಸಮಾಚಾರ

ಇಂದಿನಿಂದ ನಟರಿಗೆ ಹಾಗೂ ನಿರ್ಮಾಪಕರಿಗೆ ಐಟಿ ವಿಚಾರಣೆ​ ಸಾಧ್ಯತೆ – ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಆದೇಶಿಸದ ಐಟಿ ಇಲಾಖೆ !

ಕನ್ನಡ ಚಿತ್ರರಂಗಕ್ಕೆ ಕಳೆದ ಗುರುವಾರವರದ ಬೆಳ್ಳಂಬೆಳಿಗ್ಗೆಯೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು ಈಗಾಗಲೇ ಜಗಜ್ಜಾಹೀರಾತಾಗಿದೆ. ತೆರಿಗೆ ಇಲಾಖೆ‌ ಅಧಿಕಾರಿಗಳು ಸ್ಯಾಂಡಲ್​​ವುಡ್​​​ನ ಹಲವು ನಟ, ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದು , ಕಿಚ್ಚಾ ಸುದೀಪ್, ಪುನೀತ್ ರಾಜ್ ಕುಮಾರ್ , ರಾಕ್​​​ಲೈನ್ ವೆಂಕಟೇಶ್, ಶಿವರಾಜಕುಮಾರ್, ಯಶ್ ಮತ್ತು ದಿ ವಿಲನ್ ನಿರ್ಮಾಪಕ ಮನೋಹರ್ ಹಾಗೂ ಕೆಜಿಎಫ್​ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮನೆ ಮೇಲೆ ಐಟಿ ರೇಡ್​​​ ಮಾಡಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.

ಕನ್ನಡ ಚಿತ್ರರಂಗದ ಗಣ್ಯರ ಮನೆಯ ಮೇಲೆ ಸತತ 2 ರಿಂದ 3 ದಿನಗಳವರೆಗೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಆದರೆ ಇಂದಿನಿಂದ ಈ ದಾಳಿಗೆ ಸಂಬಂಧಪಟ್ಟಂತೆ ನಟ, ನಿರ್ಮಾಪಕರಿಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆಯಂತೆ .ಹಾಗಾಗಿ ದಾಳಿ ವೇಳೆ ಮನೆಯಲ್ಲಿ ಪತ್ತೆಯಾದ ಆಸ್ತಿ, ಚಿನ್ನಾಭರಣ, ದಾಖಲೆಯಿಲ್ಲದ ಆದಾಯ, ಹೂಡಿಕೆಗಳು, ಸಿನಿಮಾಗಳಿಂದ ಬಂದ ಆದಾಯಗಳ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಇವೆಲ್ಲದಕ್ಕೂ ಸೂಕ್ತ ದಾಖಲೆಗಳನ್ನ ಒದಗಿಸುವಂತೆ ನಟ, ನಿರ್ಮಾಪಕರಿಗೆ ಐಟಿ ಇಲಾಖೆ ಆದೇಶಿಸದೆ.

ಒಟ್ಟಿನಲ್ಲಿ ಈ ನಿಮಿತ್ತ ಕೆಲ ನಟ, ನಿರ್ಮಾಪಕರು ಇಂದು ಐಟಿ ಕಚೇರಿಗೆ ಆಗಮಿಸುವ ಸಾಧ್ಯತೆ ಇದ್ದು . ಒಂದೇ ದಿನದಲ್ಲಿ ಎಲ್ಲರನ್ನೂ ಕರೆಸಿ ವಿಚಾರಣೆ ನಡೆಸಲು ಸಾಧ್ಯವಿಲ್ಲದಿರುವುದರಿಂದ ಒಂದು ವಾರಕ್ಕೆ ಒಬ್ಬರನ್ನು ಕರೆಯಿಸಿ ವಿಚಾರಣೆ ನಡೆಸಲು ಐಟಿ ಆಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top