fbpx
ಸಮಾಚಾರ

ಈ ಸಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಅನುಮಾನವಂತೆ – ಹಾಗಾದರೆ ಅಭಿಮಾನಿಗಳಿಗೆ ಕಾದಿದೆಯೇ ಭಾರಿ ನಿರಾಸೆ ?

ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟು ಹಬ್ಬವಿದೆ. ಎಂದಿನಂತೆ ತಮ್ಮ ಮೆಚ್ಚಿನ ನಾಯಕ ನಟನ ಹುಟ್ಟುಹಬ್ಬವನ್ನು ತಮ್ಮ ಹುಟ್ಟು ಹಬ್ಬ ಎಂಬಂತೆ ಆಚರಿಸುವ ಅಭಿಮಾನಿಗಳು ದರ್ಶನ್ ರವರ ಹುಟ್ಟು ಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಆದರೆ ದುರದೃಷ್ಟ ವೆಂಬಂತೆ ಇದೀಗ ಆ ಎಲ್ಲಾ ಅಭಿಮಾನಿಗಳು ನಿರಾಸೆಗೊಳಗಾಗುವ ಸಂಗತಿಯೊಂದು ಎದುರಾಗಿದೆ!

ಹೌದು, ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅನುಮಾನ ಬಹುತೇಕ ಎನ್ನಲಾಗುತ್ತಿದೆ. ನಿನ್ನೆಯಷ್ಟೇ ರಾಕಿಂಗ್​ ಸ್ಟಾರ್​ ಯಶ್ ರವರು
ಸಾಮಾಜಿಕ ಜಾಲ ತಾಣದಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿ ‘ಈ ಭಾರಿ ನನಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಕ್ಕೆ ಇಷ್ಟವಿಲ್ಲ ಏಕೆಂದರೆ ನಮ್ಮ ಕುಟುಂಬದ ಹಿರಿಯರಾದ ಡಾ. ಅಂಬರೀಶ್ ರವರು ನಮ್ಮನ್ನೆಲ್ಲ ಅಗಲಿದ್ದಾರೆ ಹಾಗಾಗಿ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಾನು ಈ ಸಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ’ ಎಂದು ಹೇಳಿದ್ದರು.

ಇದೀಗ ಇದರ ಬೆನ್ನಲ್ಲೇ ಡಾ. ಅಂಬರೀಶ್ ರವರನ್ನು ಅತ್ಯಂತ ಅಭಿಮಾನದಿಂದ ಕಾಣುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬಿ ಅಪ್ಪಾಜಿಯ ಅಗಲಿಕೆಯ ನೋವಿನಿಂದ ಇನ್ನು ಹೊರ ಬಂದಿಲ್ಲ ಹಾಗಾಗಿ ಅವರು ಸಹ ಮುಂದಿನ ತಿಂಗಳು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top