fbpx
ಉಪ್ಪಯುತ್ತ ಮಾಹಿತಿ

ಈ ದಾಖಲೆಗೂ ಆಧಾರ್ ಲಿಂಕ್ ಕಡ್ಡಾಯವಾಗಲಿದೆಯಂತೆ – ಹಾಗಾದರೆ ಅದು ಯಾವ ದಾಖಲೆ ಗೊತ್ತೇ ?

ಪಂಜಾಬ್ ನ ಪ್ಹಾಗ್ವಾರನಲ್ಲಿ ನಡೆಯುತ್ತಿರುವ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ಡಿಎಲ್ ಗೆ(ಚಾಲನ ಪರವಾನಗಿ) ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರಲಾಗುವುದು ಎಂದರು.

ಹೌದು, ಶೀಘ್ರದಲ್ಲೇ ಚಾಲನ ಪರವಾನಗಿ(ಡಿಎಲ್‌)ಗೆ ಆಧಾರ್‌ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.

ಅಷ್ಟಕ್ಕೂ ಡಿಎಲ್ ಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಕಾನೂನನ್ನ ಜಾರಿಗೆ ತರುತ್ತಿರುವುದರ ಹಿಂದಿನ ಉದ್ದೇಶ ಏನು ಗೊತ್ತೇ ?

‘ಪ್ರಸ್ತುತ ಅಪಘಾತಗಳಾದಾಗ ಅದಕ್ಕೆ ಕಾರಣನಾದ ವ್ಯಕ್ತಿ ತಪ್ಪಿಸಿಕೊಂಡು ನಕಲಿ ಡಿಎಲ್‌ ನೀಡುವ ಸಾಧ್ಯತೆಯೂ ಇದೆ. ಆದರೆ ಡಿಎಲ್ ಗೆ ಆಧಾರ್‌ ಲಿಂಕ್ ಮಾಡಿದ್ದಾರೆ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗದು.
ನೀವು ನಿಮ್ಮ ಹೆಸರು ಬದಲಿಸಬಹುದು. ಆದರೆ, ಬಯೋಮೆಟ್ರಿಕ್‌ ಬದಲಿಸಲಾಗದು. ಡಿಎಲ್‌ ನಕಲು ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಸಚಿವರು ಹೇಳಿದ್ದಾರೆ. ಹಾಗಾಗಿ ಡಿಎಲ್ ಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವುದರ ಹಿಂದೆ ಈ ಉದ್ದೇಶವು ಇದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top