fbpx
ಮನೋರಂಜನೆ

ಪುನೀತ್ ರಾಜಕುಮಾರ್ ಬಳಿ ಕ್ಷಮೆ ಕೇಳಿದ ಯಶ್- ಕಾರಣವೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ‘ನಟಸಾರ್ವಭೌಮ’ ಚಿತ್ರತಂಡದ ಕ್ಷಮೆಯಾಚಿಸಿದ್ದಾರೆ. ಹೌದು, ನೆನ್ನೆ ಹುಬ್ಬಳ್ಳಿಯಲ್ಲಿ ನಡೆದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ನಟ ಯಶ್ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು ಆದ್ರೆ ಐಟಿ ದಾಳಿ ಕಾರಣ ಯಶ್​ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವ ಹಾಗಾಯಿತು. ಹಾಗಾಗಿ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ತೆರಳಲು ಯಶ್ ಅವರಿಗೆ ಸಾಧ್ಯವಾಗಲಿಲ್ಲ.

ಐಟಿ ರೇಡ್ ನಿಂದಾಗಿ ಹುಬ್ಬಳ್ಳಿಗೆ ತೆರಳೊ ಫ್ಲೈಟ್​ಗೆ ತಡವಾಯ್ತು. ಈ ಹಿನ್ನೆಲೆಯಲ್ಲಿ ಯಶ್​ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾದ್ಯವಾಗದಿದ್ದುದರ ಬಗ್ಗೆ ಪುನೀತ್ ರಾಜ್‍ಕುಮಾರ್ ಮತ್ತು ಹುಬ್ಬಳ್ಳಿಯ ಅಭಿಮಾನಿಗಳ ಕ್ಷಮೆ ಕೋರಿರುವ ಯಶ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ.

 

 

ಯಶ್ ಅವರ ಫೇಸ್ಬುಕ್ ಪೋಸ್ಟ್ ಈ ರೀತಿ ಇದೆ.
“ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಇಂದು ವಿಮಾನ ಕೈತಪ್ಪಿದ ಕಾರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ನನ್ನ ಮೇಲೆ ಅಪಾರ ಪ್ರೀತ್ಯಾದರಗಳನ್ನು ಹೊಂದಿರುವ ಹುಬ್ಬಳ್ಳಿ ಭಾಗದ ಅಭಿಮಾನಿಗಳ ಕ್ಷಮೆ ಕೋರುತ್ತೇನೆ. ಪವರ್ ಸ್ಟಾರ್ ಅಪ್ಪು ರವರು, ಸಹೃದಯಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ರವರು, ನಿರ್ದೇಶಕರಾದ ಸಹೋದರ ಪವನ್ ಒಡೆಯರ್, ಛಾಯಾಗ್ರಾಹಕರಾದ ವೈದಿ ಸೇರಿದಂತೆ ನಟಸಾರ್ವಭೌಮ ಇಡೀ ಚಿತ್ರತಂಡಕ್ಕೆ ನನ್ನ ಶುಭಾಷಯಗಳನ್ನು ಸಲ್ಲಿಸುತ್ತೇನೆ. ಅಪ್ಪು ರವರ ಮೇಲಿನ ನಿಮ್ಮ ಪ್ರೀತಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ.”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top