fbpx
ಸಮಾಚಾರ

“ಸಾಹಿತ್ಯ ಸಮ್ಮೇಳನದಲ್ಲಿ ಬಿಜೆಪಿ ಪರ ಮಾತನಾಡಿದ ಮಾಳವಿಕಾ” – ರಣಾಂಗಣವಾಯಿತು ಸಾಹಿತ್ಯ ಸಮ್ಮೇಳನ ವೇದಿಕೆ

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯ ಚರ್ಚಾಗೋಷ್ಠಿಯೊಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಅಸಹಿಷ್ಣುತೆ ಕುರಿತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವ್ರು ಬಿಜೆಪಿಯನ್ನು ಹೊಗಳುವ ರೀತಿಯಲ್ಲಿ ಮಾತನಾಡಿದ್ದಕ್ಕೆ ಕೆಲ ಪ್ರೇಕ್ಷಕರು ವಿರೋಧಿಸಿದರು. ಹಾಗಾಗಿ ಪೊಲೀಸ್ ಭದ್ರತೆಯಲ್ಲಿ ಗೋಷ್ಠಿಯನ್ನು ನಡೆಸಲಾಯಿತು.

ಕೇಂದ್ರ ಸರಕಾರವನ್ನು ಅಸಹಿಷ್ಣು ಎಂದು ಟೀಕಿಸುವವರನ್ನು ನಟಿ ಮಾಳವಿಕಾ ತರಾಟೆಗೆ ತೆಗೆದುಕೊಂಡರು. ಪರೋಕ್ಷ ವಾಗಿ ಯುಪಿಎ ಸರಕಾರವನ್ನು ದೂಷಿಸಿದರು. ಇದರಿಂದ ಕೆರಳಿದ ಸಭಿಕರು, ನೀವು ಬಿಜೆಪಿ ಕಾರ್ಯಕರ್ತರಂತೆ ಮಾತನಾಡುತ್ತಿದ್ದೀರ ಎಂದು ಪ್ರತಿಭಟನೆ ನಡೆಸಿದರು.

 

 

‘ಪ್ರಭುತ್ವ ಮತ್ತು ಅಸಹಿಷ್ಣುತೆ’ ಎಂಬ ಕುರಿತು ಮಾತನಾಡಿದ ಮಾಳವಿಕಾ, ಒಂದೆಡೆ ನೇರವಾಗಿ ಬಿಜೆಪಿ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಳ್ಳುತ್ತ, ಕೇಂದ್ರ ಸರಕಾರವನ್ನು ಸಹಿಸಿಕೊಳ್ಳದವರು ಅಸಹಿಷ್ಣುಗಳು ಎಂದು ಟೀಕಿಸಿದರು. ಈ ನಡುವೆ ಹಲವರು ಎದ್ದು ನಿಂತು ಗೋಷ್ಠಿಗೆ ಅಡ್ಡಿಪಡಿಸಿದರು. ”ನೀವು ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಮಂಡಿಸಲು ಬಂದಿಲ್ಲ. ಬಿಜೆಪಿ ಕಾರ್ಯಕರ್ತರಾಗಿ ಬಂದಿದ್ದೀರಿ, ಮಾತು ನಿಲ್ಲಿಸಿ, ಇಲ್ಲಿ ರಾಜಕೀಯದ ಮಾತನಾಡಬೇಡಿ” ಎಂದು ಕೂಗಿದರು. ಇದರಿಂದ ಗಲಿಬಿಲಿಗೆ ಒಳಗಾದ ಮಾಳವಿಕಾ ಮಾತು ನಿಲ್ಲಿಸಿದರು.

ಆಗ ಮಾಳವಿಕಾ ಸಿಟ್ಟುಗೊಂಡು ಮಾತು ನಿಲ್ಲಿಸಿ ವೇದಿಕೆಯ ಮೇಲೆ ಕುಳಿತರು. ಆದರೆ, ಇನ್ನುಳಿದ ಪ್ರೇಕ್ಷಕರು ಮಾಳವಿಕಾ ಮಾತು ಮುಂದುವರಿಸಬೇಕೆಂದೂ, ಅವರಿಗೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕೆಂದೂ ಆಗ್ರಹಿಸಿದರು. ಆಗ ಪೊಲೀಸ್ ಭದ್ರತೆಯಲ್ಲಿ ಮಾಳವಿಕಾ ಮಾತು ಮುಂದುವರೆಸಿದರು. ಆದರೆ, ವಿಷಯಾಂತರ ಮಾಡಿ ಕನ್ನಡ ಮಾಧ್ಯಮ ಬಗ್ಗೆ ಮಾತನಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top