fbpx
ಸಮಾಚಾರ

ಐಟಿ ರೇಡ್ ಮುಗಿದರೂ ನಟರಿಗೆ ಸಂಕಷ್ಟ ತಪ್ಪುವುದಿಲ್ಲ

ಸತತ ಮೂರು ದಿನಗಳ ಐಟಿ ಪರಿಶೋಧದ ಬಳಿಕ ಸ್ಯಾಂಡಲ್ ವುಡ್ ನಟರ ಮನೆಯ ಲೆಕ್ಕ ಪಾತ್ರಗಳ ಪರಿಶೋಧನಾ ಕಾರ್ಯ ಮುಕ್ತಾಯವಾಗಿದೆ. ಸುದೀಪ್, ಶಿವಣ್ಣ, ಪುನೀತ್ ಮತ್ತು ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಿರ್ಗಮಿಸಿದ್ದಾರೆ.. ಯಶ್ ನಿವಾಸದಲ್ಲಿ ಪರಿಶೋಧನಾ ಕಾರ್ಯ ಮುಗಿಯುವ ಹಂತಕ್ಕೆ ತಲುಪಿದೆ.

 

 

ಎಲ್ಲಾ ನಟರ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಕ್ಕ ಪರಿಶೋದನೆಯನ್ನು ಮುಗಿಸಿದ್ದರೂ ಯಾರಿಗೂ ಸಂಕಷ್ಟ ಮುಗಿದಿಲ್ಲ. ಏಕೆಂದರೆ ಸ್ಟಾರ್ ನಟರ ಕುಟುಂಬದ ಆಸ್ತಿಪಾಸ್ತಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಸದ್ಯ ಐಟಿ ಅಧಿಕಾರಿಗಳ ವಶದಲ್ಲಿದೆ. ಅಲ್ಲದೇ ಬ್ಯಾಂಕ್ ಖಾತೆ, ಲಾಕರ್ ಗಳಲ್ಲಿಟ್ಟಿರುವ ಚಿನ್ನಾಭರಣಗಳ ದಾಖಲೆಗಳನ್ನು ಕೂಡ ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಎಲ್ಲಾ ದಾಖಲೆಗಳನ್ನು ಪರಿಶೀಲಿಸುವಾಗ ಅಧಿಕಾರಿಗಳು ವಿಚಾರಣೆಗೆ ಬನ್ನಿ ಎಂದು ಹೇಳಿದಾಗಲೆಲ್ಲಾ ಇನ್ಮುಂದೆ ಸಾರ್ ನಟರು ಐಟಿ ಕಚೆರಿಗೆ ಹೋಗಬೇಕಾಗಿದೆ. ಆಸ್ತಿಪಾಸ್ತಿ ಬಗ್ಗೆ ಸ್ಟಾರ್ ನಟರು ಹಾಗೂ ಅವರ ಕುಟುಂಬಸ್ಥರು ಪದೇ ಪದೇ ವಿಚಾರಣೆಗೆ ಹಾಜರಾಗಿ ತಮ್ಮ ಆದಾಯದ ಮಾಹಿತಿಯನ್ನು ನೀಡಬೇಕಾಗುತ್ತದೆ. ಐಟಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top