fbpx
ಸಮಾಚಾರ

“ಕನ್ನಡ ಸ್ಟಾರ್ ನಟರ ಮೇಲೆ ಐಟಿ ರೇಡ್ ಹಿಂದೆ ಕೇಂದ್ರ ಸರ್ಕಾರದ ಕೈವಾಡದ ಅನುಮಾನ” ಮಾಜಿ ಸಿಎಂ ಸಿದ್ದರಾಮಯ್ಯ.

ಸತತ ಮೂರು ದಿನಗಳ ಐಟಿ ಪರಿಶೋಧದ ಬಳಿಕ ಸ್ಯಾಂಡಲ್ ವುಡ್ ನಟರ ಮನೆಯ ಲೆಕ್ಕ ಪಾತ್ರಗಳ ಪರಿಶೋಧನಾ ಕಾರ್ಯ ಮುಕ್ತಾಯವಾಗಿದೆ. ಸುದೀಪ್, ಶಿವಣ್ಣ, ಪುನೀತ್ ಮತ್ತು ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಿರ್ಗಮಿಸಿದ್ದಾರೆ.. ಯಶ್ ನಿವಾಸದಲ್ಲಿ ಪರಿಶೋಧನಾ ಕಾರ್ಯ ಮುಗಿಯುವ ಹಂತಕ್ಕೆ ತಲುಪಿದೆ.

 

 

ಎಲ್ಲಾ ನಟರ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಕ್ಕ ಪರಿಶೋದನೆಯನ್ನು ಮುಗಿಸಿದ್ದರೂ ಈ ಬಗೆಗಿನ ಬಿಸಿ ಬಿಸಿ ಚರ್ಚೆಗಳು ಮಾತ್ರ ಕಡಿಮೆಯಾಗಿಲ್ಲ.. ಐಟಿ ದಾಳಿಯ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದು ಚೆರ್ಚೆಗಳು ತಾರಕಕ್ಕೇರಿತ್ತಿವೆ.

ಕನ್ನಡ ಸ್ಟಾರ್ ನಟರು ಹಾಗೂ ಮೂವರು ನಿರ್ಮಾಪಕರುಗಳ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹಿಂದೆ ಕೇಂದ್ರಸರ್ಕಾರದ ಕೈವಾಡದ ಬಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತಿತರರು ಅನುಮಾನ ವ್ಯಕ್ತಪಡಿಸಿದ್ದಾರೆ.. ಐಟಿ ದಾಳಿ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

“ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದ್ದರೆ ಸಂಬಂಧಿತ ಲೆಕ್ಕಪತ್ರಗಳ ಪರಿಶೀಲನೆ ನಡೆಸುವ ಅಧಿಕಾರ ಆದಾಯ ತೆರಿಗೆ ಇಲಾಖೆಗೆ ಇದೆ. ಅದನ್ನು ಗೌರವಿಸೋಣ. ಆದರೆ, ಮೋದಿ ಸರ್ಕಾರದ ಐಟಿ ಇಲಾಖೆಯ ಕಾರ್ಯಶೈಲಿಯನ್ನು ಗಮನಿಸಿದರೆ ದಾಳಿ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.. ಮಾಜಿ ಮುಖ್ಯಮಂತ್ರಿಗಳ ಈ ಟ್ವೀಟ್ ಸಾರ್ವಜನಿಕ ವಲಯದಲ್ಲಿ ಭಾರಿಗೆ ಚರ್ಚೆಗೆ ಗ್ರಾಸವಾಗುತ್ತಿಗೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top