fbpx
ಮನೋರಂಜನೆ

“ಈ ರೀತಿ ಆಗ್ತಿದೆಯಲ್ಲಾ ಎಂದು ಬೇಸರವಾಗುತ್ತಿತ್ತು” ಐಟಿ ದಾಳಿ ಕುರಿತು ಶಿವಣ್ಣ ಮೊದಲ ಪ್ರತಿಕ್ರಿಯೆ.

ಸತತ ಎರಡು ದಿನಗಳ ಐಟಿ ಪರಿಶೋಧದ ಬಳಿಕ ನಟ ಶಿವರಾಜಕುಮಾರ್ ಮನೆಯ ಲೆಕ್ಕ ಪಾತ್ರಗಳ ಪರಿಶೋಧನಾ ಕಾರ್ಯ ಮುಕ್ತಾಯವಾಗಿದೆ. ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಿರ್ಗಮಿಸಿದ್ದಾರೆ.. ಪರಿಶೋಧನಾ ಕಾರ್ಯ ಮುಗಿದ ಬಳಿಕ ಐಟಿ ರೇಡ್ ಬಗ್ಗೆ ಇದೇ ಮೊದಲ ಬಾರಿಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದು “ನನಗೆ ಇದೊಂದು ಹೊಸ ಅನುಭವ” ಎಂದು ಹೇಳಿದ್ದಾರೆ.

 

 

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ನಂತರ ಮೊದಲ ಬಾರಿಗೆ ಮಾತನಾಡಿದ ಅವರು, “ಐಟಿ ರೇಡ್ ಆಗಿರುವುದಕ್ಕೆ ಕಾರಣವೇನು ಎಂಬುದು ನನಗೆ ಗೊತ್ತಿಲ್ಲ. ನನ್ನ ಮನೆ ಮೇಲೆ ಮೊದಲ ಬಾರಿ ರೇಡ್ ಆಗಿದೆ. 1984-85 ನಲ್ಲಿ ಚೆನ್ನೈನಲ್ಲಿದ್ದಾಗ ಒಮ್ಮೆ ರೇಡ್ ಆಗಿತ್ತು.. ರೇಡ್ ಆಗುತ್ತಿರುವಾಗ ಸ್ವಲ್ಪ ಬೇಜಾರ್ ಆಗುತ್ತಿತ್ತು. ಇರಿಟೇಟ್ ಆದರೂ ಸಹಕಾರ ನೀಡಬೇಕಿತ್ತು, ಅಧಿಕಾರಿಗಳು ಕೂಡ ಸಂಯಮದಿಂದಲೇ ವರ್ತಿಸಿದರು” ಎಂದು ಹೇಳಿದರು.

“ನಾವು ಸ್ವಲ್ಪ ತಡವಾದರೂ ತೆರಗೆಯೆನ್ನು ಕಟ್ಟಿ ಬಿಡುತ್ತೇವೆ. ದಾಳಿ ವೇಳೆ ಅಧಿಕಾರಿಗಳು ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ನಮಗೆ ನೋಟೀಸ್​ ನೀಡಲಿದ್ದಾರೆ. ಆಗ ನಾನು ಮತ್ತು ಪತ್ನಿ ಗೀತಾ ಅವರು ಹೇಳಿಕೆ ನೀಡಬೇಕಾಗುತ್ತದೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ ಹಾಗೂ ಅವರು ಕೇಳಿದ ದಾಖಲೆಗಳನ್ನು ನೀಡಿದ್ದೇವೆ” ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top