fbpx
ಸಮಾಚಾರ

ಬಂದ್‌ ಆಗಲಿದೆಯಂತೆ 2,000 ರೂಪಾಯಿ ಮೌಲ್ಯದ ನೋಟಿನ ಮುದ್ರಣ ! ಹಾಗಾದರೆ ಮುಂದೇನ್ ಮಾಡೋದು ?

ಅಪನಗದೀಗರಣ ಪ್ರಕ್ರಿಯೆಯ ಸಂದರ್ಭದಲ್ಲಿ 2 ಸಾವಿರ ಮುಖಬೆಲೆಯ ನೋಟು ಚಲಾವಣೆಗೆ ಬಂದಿತ್ತು. ಆದರೆ ವಿಪರ್ಯಾಸವೆಂಬಂತೆ ಇದೀಗ ಚಲಾವಣೆಗೆ ಬಂದಿದ್ದ ಆ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಅತ್ಯಂತ ಕನಿಷ್ಠ ಎನ್ನಬಹುದಾದ ಪ್ರಮಾಣಕ್ಕೆ ಇಳಿಸಲು ಮುಂದಾಗುತ್ತಿದೆ ಎನ್ನುವ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

ಅಷ್ಟಕ್ಕೂ ಭಾರತೀಯ ರಿಸರ್ವ್ ಬ್ಯಾಂಕ್‌ 2 ಸಾವಿರ ಮುಖಬೆಲೆಯ ನೋಟನ್ನು ಅತ್ಯಂತ ಕನಿಷ್ಠ ಎನ್ನಬಹುದಾದ ಪ್ರಮಾಣಕ್ಕೆ ಇಳಿಸಲು ಮುಂದಾಗುತ್ತಿರುವುದರ ಹಿಂದೆ ಒಂದು ಬಲವಾದ ಕಾರಣವಿದೆ. ಹೌದು, ಅಪನಗದೀಗರಣ ಪ್ರಕ್ರಿಯೆಯ ಸಂದರ್ಭದಲ್ಲಿ ಚಲಾವಣೆಗೆ ಬಂದ 2 ಸಾವಿರ ರೂ. ನೋಟು ಇದೀಗ ಕಾಳಧನಿಕ ಸ್ನೇಹಿಯಾಗಿ ಮಾರ್ಪಾಡಾಗಿದ್ದು ಹೆಚ್ಚು ಮೌಲ್ಯ ಹೊಂದಿರುವ ಕಾರಣ ಈ ನೋಟನ್ನು ಆರಾಮವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಎಂಬ ಕಾರಣಕ್ಕೆ ಕಾಳಧನಿಕರು 2 ಸಾವಿರ ಮುಖಬೆಲೆಯ ನೋಟನ್ನು ಹೆಚ್ಚು-ಹೆಚ್ಚು ಪ್ರಮಾಣದಲ್ಲಿ ಸಂಗ್ರಹಿಸಿ ಹಾಗೂ ಶೇಖರಿಸಿ ಇಡುತ್ತಿದ್ದಾರೆ ಎಂಬ ಅನುಮಾನ ಮೋದಿ ಸರ್ಕಾರಕ್ಕೆ ಬಂದಿದ್ದು, ಈ ನಿಟ್ಟನಲ್ಲಿ ಎಚ್ಚೆತ್ತು ಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ 2 ಸಾವಿರ ಮುಖಬೆಲೆಯ ನೋಟನ್ನು ಅತ್ಯಂತ ಕನಿಷ್ಠ ಎನ್ನಬಹುದಾದ ಪ್ರಮಾಣಕ್ಕೆ ಇಳಿಸಲು ಮುಂದಾಗುತ್ತಿದೆ ಎಂದು ತಿಳಿದು ಬಂದಿದೆ.

ಹೀಗಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನುಭಾರತೀಯ ರಿಸರ್ವ್ ಬ್ಯಾಂಕ್‌ ಕಡಿತಗೊಳಿಸಿ ಆ ಬಳಿಕ ನಿಧಾನವಾಗಿ ಅವುಗಳನ್ನು ಚಲಾವಣೆಯಿಂದ ಹಿಂಪಡೆದು,ಕಡಿಮೆ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ ಎಂದು ಒಂದು ಖಾಸಗಿ ವೆಬ್‌ಸೈಟ್‌ ವರದಿ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top