fbpx
ಸಮಾಚಾರ

ಮನೆಯಿಂದ ಹೊರ ಬರುತ್ತಿದ್ದಂತೆ ಫೇಸ್ಬುಕ್ ಲೈವ್ ಮಾಡಿದ ಪುನೀತ್ ರಾಜಕುಮಾರ್.

ಸತತ ಎರಡು ದಿನಗಳ ಐಟಿ ಪರಿಶೋಧದ ಬಳಿಕ ನಟ ಪುನೀತ್ ರಾಜಕುಮಾರ್ ಮನೆಯ ಲೆಕ್ಕ ಪಾತ್ರಗಳ ಪರಿಶೋಧನಾ ಕಾರ್ಯ ಮುಕ್ತಾಯವಾಗಿದೆ. ನಿವಾಸದಲ್ಲಿ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇಂದು ನಿರ್ಗಮಿಸಿದ್ದಾರೆ.. ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ.

ಈ ವೇಳೆ ಕಾರಿನಲ್ಲಿಯೇ ಫೇಸ್‍ಬುಕ್ ಲೈವ್ ಮಾಡಿ ಮಾತನಾಡಿದ್ದು ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ ‘ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಹಾಗೂ ಪವನ್​ಒಡೆಯರ್​ ಕಾಂಬಿನೇಷನ್​ನಲ್ಲಿ ಮೂಡಿ ಬರ್ತಾ ಇರೋ ನಟಸಾರ್ವಭೌಮ ಸಿನಿಮಾದ ಆಡಿಯೋ ಲಾಂಚ್‌ ಕಾರ್ಯಕ್ರಮ ಇವತ್ತು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿದೆ. ಇವತ್ತು ಸಂಜೆ 5.30 ಕ್ಕೆ ಭರ್ಜರಿ ಸೆಟ್​ನಲ್ಲಿ ಆಡಿಯೋ ರಿಲೀಸ್​ ಆಗಲಿದ್ದು ಸಿನಿಮಾ ತಂಡ ಮತ್ತು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಆಡಿಯೋವನ್ನು ಅನಾವರಣಗೊಳಿಸಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top