fbpx
ಸಮಾಚಾರ

ಕರ್ನಾಟಕದಿಂದಲೇ ಪ್ರಕಾಶ್ ರೈ ಸ್ಪರ್ಧೆ- ಯಾವ ಕ್ಷೇತ್ರ ಗೊತ್ತಾ? ಬೆಂಬಲ ನೀಡಿತು ಈ ಪಕ್ಷ.

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹುಭಾಷಾ ನಟ ಪ್ರಕಾಶ್ ರೈ. ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಟೀಕಿಸುತ್ತಲೇ ಬಂದಿದ್ದರು.

2019 ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೊಸ ವರ್ಷದಂದು ಘೋಷಿಸಿದ್ದ ನಟ ಪ್ರಕಾಶ್ ರೈ ಅವರು ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕೇಂದ್ರದಿಂದ ಸ್ಪರ್ಧೆ ಮಾಡಲು ಬಯಸಿರುವ ನಟ ಪ್ರಕಾಶ್ ರಾಜ್ ಗೆ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿದೆ. ಪ್ರಕಾಶ್ ರೈಗೆ ಬೆಂಬಲ ನೀಡುವುದಾಗಿ ಆಪ್ ಮುಖಂಡ ಸಿಸೋಡಿಯಾ ಹೇಳಿದರು.

ನೆನ್ನೆ ಬೆಂಗಳೂರಿನಲ್ಲಿ app ಮುಖಂಡ ಮನೀಷ್ ಸಿಸೋಡಿಯಾ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶರ್ಶ ರಾಜ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಪ್ರಕಾಶ್ ರೈ “ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಈ ವೇಳೆ ಎಎಪಿ ಎಂಬಲ ಸಿಕ್ಕರೆ ಹೆಚ್ಚು ಸಂತೋಷವಾಗುತ್ತದೆ ” ಎಂದರು.

ಬೆಂಗಳೂರು ಸೆಂಟ್ರಲ್ ಯಾಕೆ?
ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೇಲೆ ಪ್ರಕಾಶ್ ರೈ ಕಣ್ಣು ಹಾಕಿರುವುದಕ್ಕೆ ಕಾರಣವೂ ಇದೆ. ಆಹಾರ ನಾಗರೀಕ ಸರಬರಾಜು ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಪ್ರಕಾಶ್ ರೈಗೆ ಸ್ನೇಹಿತ. ಚಾಮರಾಜಪೇಟೆ ಬೆಂಗಳೂರು ಕೇಂದ್ರ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರವಾಗಿದೆ. ಹೀಗಾಗಿ ಪ್ರಕಾಶ್ ರೈಗೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಸ್ಫರ್ಧಿಸುವಂತೆ ಜಮೀರ್ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಪ್ರಕಾಶ್ ರೈ ಈ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top