fbpx
ಸಮಾಚಾರ

ಬಾಲಿವುಡ್ ಬೆಳ್ಳಿತೆರೆಯ ಮೇಲೆ ಮಿಂಚಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ !?

ಇತ್ತೀಚಿಗಂತೂ ಸಿನಿಮಾ ರಂಗದಲ್ಲಿ ಕೇವಲ ಬಯೋಪಿಕ್ ಗಳದೇ ಕಾರುಬಾರು. ಹೌದು, ಒಂದಾದಮೇಲೆ ಒಂದರಂತೆ ಶ್ರೇಷ್ಠ ಸಾಧನೆಗೈದ ವ್ಯಕ್ತಿಗಳ ಜೀವನ ಚಿತ್ರವನ್ನು ತೆರೆಯೇ ಮೇಲೆ ತರುವ ಪ್ರಯತ್ನ ಎಲ್ಲಾ ಚಿತ್ರರಂಗದಲ್ಲೂ ಭರದಿಂದ ಸಾಗುತ್ತಿದೆ.

ಅದರಲ್ಲೂ ಬಾಲಿವುಡ್ ನಲ್ಲಂತೂ ಬಯೋಪಿಕ್ ಗಳದೇ ಹಾವಳಿ. ಹೀಗಾಗಲೇ ಬಾಳಾ ಸಾಹೇಬ ಠಾಕ್ರೆ ಅವರ ಜೀವನಾಧಾರಿತ ಸಿನಿಮಾ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಜೀವನಾಧಾರಿತ ಸಿನಿಮಾ, ತೆರೆಯ ಮೇಲೆ ಅಪ್ಪಳಿಸಲು ಸಜ್ಜಾಗಿದ್ದು ಇದೀಗ ಇದರ ಬೆನ್ನಲ್ಲೇ ಬೆಳ್ಳಿತೆರೆಯೇ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಿಂಚಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ಅರೆ! ಇದೇನಿದು ? ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆಯೇ? ಎಂದು ಹೌಹಾರಬೇಡಿ! ಅಸಲಿಗೆ ಬೆಳ್ಳಿಯ ತೆರೆಯ ಮೇಲೆ ಮಿಂಚಲಿರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾ .

ಅಂದಹಾಗೆ ‘ಮೇರಿ ಕೋಮ್​’ ಸಿನಿಮಾ ನಿರ್ದೇಶಿಸಿದ ಒಮಂಗ್​ ಕುಮಾರ್​ ಈ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದು , ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್​ ಒಬೆರಾಯ್​ ಬಣ್ಣ ಹಚ್ಚಲಿದ್ದಾರೆ.

ಈ ಸಿನಿಮಾ ಬಗ್ಗೆ ಖ್ಯಾತ ವಿಮರ್ಶಕ ಮತ್ತು ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು. ಚಿತ್ರದ ಮೊದಲ ಪೋಸ್ಟರ್ ಇದೆ ತಿಂಗಳ 7 ನೆ ತಾರೀಖಿನಂದು ಬಿಡುಗಡೆಯಾಗಲಿದ್ದು , ಸಿನಿಮಾದ ಚಿತ್ರೀಕರಣ ಇದೆ ತಿಂಗಳ ಮದ್ಯ ಭಾಗದಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top