fbpx
ತಂತ್ರಜ್ಞಾನ

ಹೊಸ ವರ್ಷಕ್ಕೆ ವಾಟ್ಸಪ್ ತನ್ನ ಬಳಕೆದಾರರಿಗೆ ನೀಡಿರುವ ವಿನೂತನ ಸೇವೆಗಳು ಯಾವುವು ಗೊತ್ತಾ ?

ಸಾಮಾಜಿಕ ಜಾಲತಾಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಈಗಲಂತೂ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕವೂ ಎಲ್ಲರೂ ಈ ಫೇಸ್ ಬುಕ್ , ವಾಟ್ಸಪ್ ಮತ್ತು ಇನ್​ಸ್ಟಾಗ್ರಾಂ ಅನ್ನು ಬಳಸುತ್ತಾರೆ. ಹೀಗಿರುವಾಗ ಬಳಕೆದಾರರನ್ನು ಸೆಳೆಯಲು ಈ ಆ್ಯಪ್ ಗಳು ತಮ್ಮ ಬಳೆಕೆದಾರರಿಗಾಗಿ ಹೊಸ-ಹೊಸ ಫೀಚರ್ ಗಳನ್ನು ನೀಡುತ್ತಲೇ ಇರುತ್ತಾರೆ . ಇದೀಗ ಎಲ್ಲರ ಮೋಸ್ಟ್ ಫೇವರಿಟ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದ್ದು. ಇನ್ಮುಂದೆ ವಾಟ್ಸಪ್ ನಲ್ಲಿ ಅದ್ಭುತ ಫೀಚರ್ ಗಳು ಲಭ್ಯವಾಗಲಿದೆ .

ಹೊಸ ವರ್ಷಕ್ಕೆ ವಾಟ್ಸಪ್ ತನ್ನ ಬಳಕೆದಾರರಿಗೆ ನೀಡಿರುವ ವಿನೂತನ ಸೇವೆಗಳು ಈ ಕೆಳಕಂಡಂತಿವೆ :

  • ಡಾರ್ಕ್​ ಮೋಡ್ ಆಯ್ಕೆ :

ವಾಟ್ಸಪ್​ ” ಡಾರ್ಕ್​ ಮೋಡ್​ ” ಎಂಬ ಆಯ್ಕೆಯನ್ನು ಪರಿಚಯಿಸಿದೆ. ಹೀಗಾಗಿ ಇನ್ನು ಮುಂದೆ ಕಡಿಮೆ ಬೆಳಕಿನಲ್ಲಿ ಅಪ್ಲಿಕೇಶನ್​ನ್ನು ಬಳಸಬಹುದಾಗಿದೆ. ಈ ಆಯ್ಕೆಯನ್ನು ಬಳಸಿದರೆ ವಾಟ್ಸಪ್ ಸ್ಕ್ರೀನ್ ಸಂಪೂರ್ಣ ಕಪ್ಪು ವರ್ಣಕ್ಕೆ ತಿರುಗಲಿದೆ. ಇದರಿಂದ ಮೊಬೈಲ್​ ಬೆಳಕಿನಿಂದ ಕಣ್ಣಿಗೆ ಆಗುವ ಹಾನಿ ಕಡಿಮೆಯಾಗುತ್ತದೆ. ಈಗಾಗಲೇ ಈ ಆಯ್ಕೆಯು ಟ್ವಿಟರ್, ಗೂಗಲ್ ಮ್ಯಾಪ್​ಗಳಲ್ಲಿ ಲಭ್ಯವಿದ್ದು , ಇದೇ ಮಾದರಿಯಲ್ಲಿ ಅಂಡ್ರಾಯ್ಡ್​ ಮತ್ತು ಐಒಎಸ್​ ಬಳಕೆದಾರರಿಗೆ ವಾಟ್ಸಪ್​ ‘ಡಾರ್ಕ್​ ಮೋಡ್ ‘ಫೀಚರ್​ ನ್ನು ಒದಗಿಸಲಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

  • ವಾಯ್ಸ್ ಮೆಸೇಜ್ ಆಯ್ಕೆ :

ವಾಟ್ಸಪ್ ನಲ್ಲಿ ಇನ್ನು ಮುಂದೆ ಈ ವಾಯ್ಸ್ ಮೆಸೇಜ್ ಆಯ್ಕೆ ಲಭ್ಯವಾಗಲಿದ್ದು ಇದರಿಂದಾಗಿ 3 -4 ಸಂದೇಶಗಳನ್ನು ಅನುಕ್ರಮವಾಗಿ ಆಲಿಸಬಹುದಾಗಿದೆ.

  • ಸ್ವೈಪ್ ಟು ರಿಪ್ಲೈ ಆಯ್ಕೆ :

ವಾಟ್ಸಪ್ ನಲ್ಲಿ ಇನ್ನು ಮುಂದೆ ನಾವು ಬಲಕ್ಕೆ ಸ್ವೈಪ್ ಮಾಡಿ ಪ್ರತ್ಯುತ್ತರ ನೀಡಬಹುದಾದ ಫೀಚರ್ ಇರಲಿದೆ.

  • ಕಾಂಟಾಕ್ಟ್ ರಾಂಕಿಂಗ್ ಆಯ್ಕೆ :

ಸ್ವಯಂಚಾಲಿತವಾಗಿ ವಾಟ್ಸಪ್ ನಲ್ಲಿ ಕಾಂಟ್ಯಾಕ್ಟ್ ರಾಂಕಿಂಗ್ ಆಗುತ್ತದೆ, ಅಂದರೆ ನೀವು ಹೆಚ್ಚು ಚಾಟ್ ಮಾಡುವ ಕಾಂಟ್ಯಾಕ್ಟ್ ಗಳಿಗೆ ವಾಟ್ಸಪ್ ತಾನಾಗಿಯೇ ರಾಂಕ್ ವಿಧಿಸಲಿದೆ. ಸರಳವಾಗಿ ಹೇಳುವುದಾದರೆ ನೀವು ಹೆಚ್ಚು ಸಂಪರ್ಕಿಸುವ ಕಾಂಟ್ಯಾಕ್ಟ್ ನಿಮ್ಮ ವಾಟ್ಸಪ್ ಸ್ಕ್ರೀನ್ ನ ಮೇಲ್ಭಾಗದಲ್ಲಿ ತಾನಾಗಿಯೇ ಬಂದು ಕೂರುತ್ತದೆ . ಆದರೆ ಸದ್ಯಕ್ಕೆ ಈ ಫೀಚರ್ ಆಂಡ್ರಾಯ್ಡ್ ನಲ್ಲಿ ಲಭ್ಯವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top