fbpx
ಸಮಾಚಾರ

‘ರಾಷ್ಟ್ರಕವಿ ಕುವೆಂಪು ಕಂಡ ಕನಸು ಕನಸಾಗೇ ಉಳಿದಿದೆ’ ಎಂದ ಸಾಹಿತಿ ಚಂಪಾ – ಹಾಗಾದರೆ ಕುವೆಂಪು ರವರು ಕಂಡ ಕನಸೇನು ಗೊತ್ತಾ ?

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿದ್ಯಾಕೇಂದ್ರವಾದ ಧಾರವಾಡದಲ್ಲಿ ನಡೆಯುತಿದ್ದು . ಹಾವೇರಿ, ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳು ಈ ಸಮ್ಮೇಳನದ ಅತಿಥ್ಯ ವಹಿಸಿವೆ. ಹಾಗೂ ಈ ಭಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್​ ಕಂಬಾರ್​ ಅವರನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ.

ಮೇರು ಸಾಹಿತಿಗಳ ದಂಡೇ ಈ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಗಮಿಸಿದ್ದು , ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಚಂದ್ರಶೇಖರ ಪಾಟೀಲ್ ( ಚಂಪಾ) ರವರು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ಅಂದು ರಾಷ್ಟ್ರ ಕವಿ ಕುವೆಂಪು ರವರು ಕಂಡ ಕನಸು ಕನಸು ಕನಸಾಗೇ ಉಳಿದಿರುವುದು ದುರಂತ ಎಂದು ಚಂಪಾ ನುಡಿದ್ದಾರೆ.

ಅಷ್ಟಕ್ಕೂ ಕುವೆಂಪು ರವರು ಕಂಡ ಕನಸಾದರೂ ಏನೂ ಗೊತ್ತೇ ? ಚಂಪಾ ರವರ ಮಾತುಗಳಲ್ಲೇ ಕೇಳಿ :

ಕುವೆಂಪು ರವರು ಕನ್ನಡ ಭಾಷೆ , ಶಿಕ್ಷಣ ಮಾಧ್ಯಮವಾಗ ಬೇಕು ಎಂದು ಕನಸು ಕಂಡಿದ್ದರೂ , ಆದರೆ ಆ ಕವಿಯ ಕನಸು ಇಂದಿಗೂ ಕನಸಾಗೇ ಉಳಿದಿರುವುದು ದುರಂತ ಎಂದು ಚಂಪಾ ರವರು ಬೇಸರ ವ್ಯಕ್ತಪಡಿಸಿದ್ದು. ಅಷ್ಟೇ ಅಲ್ಲದೆ, ಪರಕೀಯ ಭಾಷೆಗೆ ನಾವು ದಾಸನು ದಾಸರಾಗಿ ಬಾಳುತ್ತಿದ್ದೇವೆ. ನಾನು ಇಂಗ್ಲಿಷ್ ಪ್ರಾಧ್ಯಾಪಕನಾದರೂ ಕನ್ನಡ ನನ್ನ ಜೀವನ . ಜೀವನಕ್ಕೆ ಇಂಗ್ಲಿಷ್ ಅಗತ್ಯ. ಆದರೆ ಕನ್ನಡ ಜೀವನಕ್ಕೆ ಅನಿವಾರ್ಯ. ಕನ್ನಡಕ್ಕೆ ಕೆಟ್ಟ ದಿನಗಳು ಬರಲು ಆರಂಭವಾಗಿದೆ . ಆದರೆ ಕನ್ನಡಿಗರು ಹೋರಾಟದ ನೆಲೆಯಿಂದ ಬಂದವರೂ, ಹೀಗಾಗಿ ಕನ್ನಡವನ್ನು ಹೋರಾಟ ಮಾಡಿ ಉಳಿಸಿಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಕನ್ನಡದ ಬಗ್ಗೆ ಸಾಹಿತಿ ಚಂಪಾ ರವರು ಆತಂಕ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top