fbpx
ಭವಿಷ್ಯ

ಈ ರಾಶಿಯಲ್ಲಿಯೋ ಹುಟ್ಟಿರೋರಿಗೆ ನಾಯಕತ್ವದ ಗುಣ ಜಾತಕದಲ್ಲೇ ಇರುತ್ತದೆ.

ನಿಮ್ಮ ಜನ್ಮರಾಶಿ ಈ ನಾಲ್ಕರಲ್ಲಿದ್ದರೆ, ನೀವು ನಾಯಕತ್ವ ಗುಣಗಳನ್ನು ಹೊಂದಿರುತ್ತೀರಿ:
ರಾಶಿಚಕ್ರದ ೧೨ ರಾಶಿಗಳಲ್ಲಿಯೂ ಅದರದೇ ಆದ ಕೆಲವು ಗುಣ ವಿಶೇಷಗಳಿರುತ್ತವೆ. ಆ ಜನ್ಮರಾಶಿಗೆ ಅನುಗುಣವಾಗಿ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎನ್ನುತ್ತಾರೆ. ಕೆಲವರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣಗಳಿರುತ್ತವೆ; ಕೆಲವರು ಎಲ್ಲರಿಗೂ ಪ್ರೀತಿ ಪಾತ್ರರು, ಕೆಲವರು ಹುಟ್ಟು ಕಲಾವಿದರ, ಹೀಗೆ ಹಲವಾರು ಗುಣಗಳು.

ನಾಯಕತ್ವದ ಗುಣಗಳು ಹುಟ್ಟಿನಿಂದಲೇ ಬರಬೇಕೆಂದರೆ, ನಿಮ್ಮ ಜನ್ಮರಾಶಿ ಈ ನಾಲ್ಕರಲ್ಲಿರಬೇಕು. ಅದರ ಬಗ್ಗೆಯೇ ನಾವು ಈಗ ಹೇಳ ಹೊರಟಿರುವುದು. ಹಾಗೆಂದು ಬೇರೆ ರಾಶಿಗಳಲ್ಲಿ ಹುಟ್ಟಿದವರು ನಾಯಕರಾಗಲು ಸಾಧ್ಯವಿಲ್ಲ ಎಂಬರ್ಥವಲ್ಲ. ಆದರೆ ಈ ಜನ್ಮರಾಶಿಯಲ್ಲಿ ಜನಿಸಿದವರು ರಾಶಿಯ ಗ್ರಹಾಧಿಪತ್ಯದ ಗುಣಗಳ ಪ್ರಭಾವದಿಂದ ಹೆಚ್ಚು ಶ್ರಮ ವಹಿಸಿದಿದ್ದರೂ ನಾಯಕರ ಗುಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೆಚ್ಚು ಎಂದು.

 

ಇಲ್ಲಿವೆ ಅವುಗಳ ಮಾಹಿತಿ:
ಮೇಷ ರಾಶಿ:ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಪರಿಶ್ರಮ ಹಾಗೂ ಶ್ರದ್ಧೆ ಮೇಷರಾಶಿಯವರ ಹುಟ್ಟುಗುಣ. ಆದರೂ ಇವರು ಕಾರ್ಯಗಳನ್ನು ಮಾಡುವಾಗ ಸುಲಭ ಮಾರ್ಗಗಳನ್ನು ಹಿಡಿಯುವಲ್ಲಿ ಸಿದ್ಧಹಸ್ತರು. ಈ ಎರಡು ಗುಣಗಳ ಸಮ್ಮೇಳನದಿಂದ ಇವರು ಎಲ್ಲರ ಪ್ರೀತಿ ಪಾತ್ರರಾಗುತ್ತಾರೆ. ಜನರಿಗೆ ಇಷ್ಟವಾಗುತ್ತಾರೆ. ಇವರಲ್ಲಿರುವ ಆತ್ಮವಿಶ್ವಾಸ ಹಾಗೂ ಜನಪ್ರಿಯತೆ ಇವರಲ್ಲಿ ನಾಯಕತ್ವ ಗುಣಗಳನ್ನು ಎತ್ತಿ ಹಿಡಿಯುತ್ತದೆ.
ಉದಾಹರಣೆ: ಬಿ.ಆರ್. ಅಂಬೇಡ್ಕರ್, ಹಿಟ್ಲರ್, ಥಾಮಸ್ ಜೆಫರ್ಸನ್

ವೃಷಭ ರಾಶಿ:ವೃಷಭ ರಾಶಿಯ ಅಧಿಪತಿ, ಶುಕ್ರ ಗ್ರಹ. ಈ ರಾಶಿಯಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ವೃಷಭದಂತಹ (ನಂದಿ, ಗೂಳಿ) ಶಕ್ತಿ, ಸಾಮರ್ಥ್ಯವನ್ನು ಹೊಂದಿರುವ ಇವರು ಸಮೂಹ ನಾಯಕತ್ವವನ್ನು ವಹಿಸುವ ಗುಣ ಹೊಂದಿರುತ್ತಾರೆ. ಇವರು ಜವಾಬ್ದಾರಿಗಳನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುತ್ತಾರೆ ಹಾಗೂ ಜನರ ಪ್ರೀತಿಗೆ ಪಾತ್ರರಾಗುತ್ತಾರೆ.
ಉದಾಹರಣೆ:ಮಾರ್ಕ ಝುಕರ್ಬರ್ಗ್, ಕಾರ್ಲ್ ಮಾರ್ಕ್ಸ್, ಸದ್ದಾಂ ಹುಸೇನ್, ಡೆೇವಿಡ್ ಬೇಕಾ

 

 

 

ಸಿಂಹರಾಶಿ:ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯಲ್ಲಿ ಜನಿಸಿದವರು ಹುಟ್ಟು ನಾಯಕರು. ಇವರು ನಂಬಲರ್ಹವಾದ ವ್ಯಕ್ತಿಗಳು ಅಲ್ಲದೆ ಕೆದರಿ ಹೋದ ವ್ಯವಸ್ಥೆಯನ್ನು ಮತ್ತೆ ವ್ಯವಸ್ಥಿತಗೊಳಿಸುವ ಸಾಮರ್ಥ್ಯವುಳ್ಳವರು. ಇವರ ಈ ಗುಣಗಳೇ ಕಾರ್ಯನಿರ್ವಹಣೆಗೆ ಚಾಲನಾಶಕ್ತಿ.
ಉದಾಹರಣೆ:ಬರಾಕ್ ಒಬಾಮಾ, ಬಿಲ್ ಕ್ಲಿಂಟನ್, ಫೀಡಲ್ ಕ್ಯಸ್ಟ್ರೋ

ಮಕರರಾಶಿ:ಈ ರಾಶಿಯ ಅಧಿಪತಿ ಶನಿ. ಮಕರ ರಾಶಿಯವರು ಸ್ವಯಂ ನಿಯಂತ್ರಣಾ ಶಕ್ತಿಯುುಳ್ಳವರು. ಈ ಗುಣದಿಂದಲೇ ಅವರು ನಾಯಕರಾಗುವ ಪ್ರಬಲ ಸಾಧ್ಯತೆ ಹೆಚ್ಚಾಗುತ್ತದೆ. ಇವರ ನಾಯಕತ್ವವು ಎಲ್ಲರಿಗೂ ಇಷ್ಟವಾಗುತ್ತದೆ. ಇವರ ಕಾರ್ಯವೈಖರಿಯು ಸಾಂಪ್ರದಾಯಿಕವಾಗಿರುತ್ತದೆಯಾದರೂ ಇವರ ಅಚಲ ನಿರ್ಧಾರಗಳು ಯಶಸ್ಸಿಗೆ ಕಾರಣವಾಗುತ್ತದೆ.
ಉದಾಹರಣೆ:ಸ್ವಾಮಿ ವಿವೇಕಾನಂದ, ಕಿಮ್ ಜಾಂಗ್ ಉನ್, ರಿಚರ್ಡ್ ನಿಕ್ಸಾನ್, ಜೆಫ್ ಬೆಸೋಸ್

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top