fbpx
ಮನೋರಂಜನೆ

“ಸುದೀಪ್ ಮನೆ ಮೇಲೆ ಐಟಿ ರೇಡ್ ಗೂ ಪೈಲ್ವಾನ್ ಸಿನಿಮಾಗೂ ಕಾರಣವಿಲ್ಲ” ನಿರ್ದೇಶಕ ಕೃಷ್ಣ.

“ಸುದೀಪ್ ಮನೆ ಮೇಲೆ ಐಟಿ ರೇಡ್ ಗೂ ಪೈಲ್ವಾನ್ ಸಿನಿಮಾಗೂ ಕಾರಣವಿಲ್ಲ. ಇನ್ನೂ ಯಾವುದೂ ಮುಕ್ತಾಯ ಆಗಿಲ್ಲ. ಸಿನಿಮಾ ಕಂಪ್ಲೀಟ್ ಆಗದೆ, ಅದರ ಆಡಿಟ್ ಶೀಟ್ ಫೈಲ್ ಆಗದೆ, ಯಾಕೆ ತನಿಖೆ ಮಾಡ್ತಾರೆ.? ಸಾಧ್ಯ ಇಲ್ಲ,,. ಅಲ್ಲದೇ ಚಿತ್ರೀಕಣ ಇನ್ನೂ ಬಾಕಿ ಇದೆ” ಅಂತಾ ಪೈಲ್ವಾನ್ ಸಿನಿಮಾ ಡೈರೆಕ್ಟರ್ ಕೃಷ್ಣ ಹೇಳಿದ್ದಾರೆ.

ಕಿಚ್ಚ ಸುದೀಪ್ ನಿವಾಸಕ್ಕೆ ಮೊನ್ನೆ ಐಟಿ ಅಧಿಕಾರಿಗಳು ಎಂಟ್ರಿಕೊಡುತ್ತಿದ್ದಂತೆಯೇ, ‘ಪೈಲ್ವಾನ್’ ಚಿತ್ರೀಕರಣವನ್ನ ಅರ್ಧಕ್ಕೆ ನಿಲ್ಲಿಸಿ ಸುದೀಪ್ ಅವ್ರು ತಮ್ಮ ನಿವಾಸಕ್ಕೆ ಬಂದಿದ್ದರು.. ಸದ್ಯ ಅವರ ಮನೆಯಲ್ಲಿ ಪರಿಶೀಲನೆ ಮುಗಿದಿದ್ದು ಐಟಿ ಅಧಿಕಾರಿಗಳು ಕಿಚ್ಚನ ಮನೆಯಿಂದ ನಿರ್ಗಮಿಸಿದ್ದಾರೆ.

ಆದರೆ ನೆನ್ನೆ ಸುದೀಪ್ ನಿವಾಸಕ್ಕೆ ‘ಪೈಲ್ವಾನ್’ ನಿರ್ದೇಶಕ ಕೃಷ್ಣ ಭೇಟಿ ಕೊಟ್ಟಿದ್ದರು. ‘ಪೈಲ್ವಾನ್’ ಬಿಗ್ ಬಜೆಟ್ ಚಿತ್ರವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಐಟಿ ಅಧಿಕಾರಿಗಳು ನಿರ್ದೇಶಕ ಕೃಷ್ಣ ರವರನ್ನ ಬರಮಾಡಿಕೊಂಡರು ಎಂಬ ಸುದ್ದಿ ಎಲ್ಲೆಡೆ ಹರಿದಾಡಿತು. ಸುದೀಪ್ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ಕೃಷ್ಣ ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದರು.

‘ಐಟಿ ಅಧಿಕಾರಿಗಳ ವಿಚಾರಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸುಮ್ಮನೆ ಮನೆಗೆ ಬಂದಿದ್ದೇನೆ ಅಷ್ಟೆ. ನನ್ನನ್ನು ಯಾವ ಅಧಿಕಾರಿಯೂ ವಿಚಾರಣೆಗೆ ಒಳಪಡಿಸಿಲ್ಲ. ಕಾಳಜಿ, ಕಳಕಳಿಯಿಂದ ಸುದೀಪ್ ಮನೆಗೆ ಬಂದೆ. ಬೇರೇನೂ ಇಲ್ಲ. ಸುದೀಪ್ ಆರಾಮಾಗಿ ಇದ್ದಾರೆ.” ಎಂದು ಕೃಷ್ಣ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top