fbpx
ಸಮಾಚಾರ

ಕೇರಳದಲ್ಲಿ ಪ್ರತಿಭಟನೆಕಾರರಿಂದ ಹಲ್ಲೆಗಳಗಾದರೂ ಕರ್ತವ್ಯನಿಷ್ಠೆ ಮೆರೆದ ಪತ್ರಕರ್ತೆ – ಶಬ್ಬಾಶ್ ಎಂದ ನೆಟ್ಟಿಗರು !

ಶ್ರೀ ಕ್ಷೇತ್ರ ‘ಶಬರಿಮಲೆ ಅಯ್ಯಪ್ಪ ಸ್ವಾಮಿ’ ಸನ್ನಿಧಿಗೆ ಮಹಿಳೆಯರು ಪ್ರವೇಶ ಮಾಡಬಹುದೆಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದ ನಂತರ ಅನೇಕ ವಾದ-ವಿವಾದಗಳು ಹುಟ್ಟಿಕೊಂಡ ಬಗ್ಗೆ ನಾವು ನೀವು ನೋಡಿದ್ದೇವೆ ಹಾಗು ಕೇಳಿದ್ದೇವೆ.

ಕೆಲವರು ಮಹಿಳೆಯರು ದೇವಸ್ಥಾನಕ್ಕೆ ಹೋಗುವುದು ಉಚಿತವೆಂದರೆ ಇನ್ನೂ ಕೆಲವರು ಅನುಚಿತವೆಂದರೂ. ಆದರೆ ಈ ಎಲ್ಲದರ ನಡುವೆಯೂ ಬುಧವಾರ ಮುಂಜಾನೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಬ್ಬರೂ ಮಹಿಳೆಯರು ಪ್ರವೇಶಿಸಿ ದರ್ಶನ ಪಡೆದುಕೊಂಡಿದ್ದು ಸದ್ಯಕ್ಕೆ ಈ ವಿಚಾರ ಕೇರಳದಲ್ಲಿ ಭಾರಿ ಕೋಲಾಹಲವನ್ನು ಎಬ್ಬಿಸಿದೆ.

ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಹೋಗಕೂಡದು ಎಂಬುದರ ತೀವ್ರ ವಿರೋಧದ ಹಿನ್ನೆಲೆಯಲ್ಲೂ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಎಂಬುವರು ಬುಧವಾರ ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿರುವುದರ ಬೆನ್ನಲ್ಲೇ ಕೇರಳ ರಾಜ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದರೂ ಅಳುತ್ತಲೇ ಕ್ಯಾಮರಾ ತೆಗೆಯುತ್ತಿದ್ದ ಪತ್ರಕರ್ತೆಯೊಬ್ಬರ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ತಿರುವನಂತಪುರದ ಕೈರಾಳಿ ಟಿವಿ ಚಾನೆಲ್ ಕ್ಯಾಮರಾಮನ್ ‘ಶಜಿಲ್ಲಾ ಅಬ್ಹುಲ್ ರೆಹಮಾನ್’ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿ, ಕ್ಯಾಮರಾ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಭಟನಾಕಾರರ ಹಿಂಸೆಗೆ ಜಗ್ಗದ ಆಕೆ ಅಳುತ್ತಲೇ ತನ್ನ ಕರ್ತವ್ಯ ನಿರ್ವಹಿಸಿದ್ದು, ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಕುರಿತಾಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪತ್ರಕರ್ತೆ ಶಜಿಲ್ಲಾ ಅಬ್ಹುಲ್ ರೆಹಮಾನ್ ನಾನು ಭಯದಿಂದ ಅಳುತ್ತಿರಲಿಲ್ಲ ಬದಲಿಗೆ ಅಸಹಾಯಕತೆಯಿಂದಾಗಿ ಅಳುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಐದಾರು ಮಂದಿ ಹಿಂದಿನಿಂದ ಬಂದು ಕ್ಯಾಮರಾ ಕಸಿದುಕೊಂಡಾಗ ನಾನು ಏನು ಮಾಡಲು ಸಾಧ್ಯ? ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಕೆಳಗೆ ಬೀಳಬೇಕಾಯಿತು, ಇದರಿಂದ ನಾನು ಹಿಂದೆ ಚಿತ್ರೀಕರಿಸಿದ ದೃಶ್ಯಗಳೆಲ್ಲಾ ಹಾಳಾಯಿತು ಎಂದು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಶಜಿಲ್ಲಾ ಅಬ್ಹುಲ್ ರೆಹಮಾನ್ ಅವರ ಕರ್ತವ್ಯ ನಿಷ್ಠೆಗೆ ತಲೆದೂಗಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top