fbpx
ಸಮಾಚಾರ

ಕಿಚ್ಚನ ಮನೆಯಲ್ಲಿ ಐಟಿ ರೇಡ್ ಮುಕ್ತಾಯವಾದರೂ ಇದ್ದಕಿದ್ದ ಹಾಗೆ ಮತ್ತೆ ಅಧಿಕಾರಿಗಳು ಅವರ ಮನೆಗೆ ದೌಡಹಿಸಿದ್ದು ಏಕೆ ಗೊತ್ತಾ?

ಕನ್ನಡ ಚಿತ್ರರಂಗಕ್ಕೆ ಗುರುವಾರ ಬೆಳ್ಳಂಬೆಳಿಗ್ಗೆಯೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು ಈಗಾಗಲೇ ಜಗಜ್ಜಾಹೀರಾತಾಗಿದೆ. ತೆರಿಗೆ ಇಲಾಖೆ‌ ಅಧಿಕಾರಿಗಳು ಸ್ಯಾಂಡಲ್​​ವುಡ್​​​ನ ಹಲವು ನಟ, ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದು , ಕಿಚ್ಚಾ ಸುದೀಪ್, ಪುನೀತ್ ರಾಜ್ ಕುಮಾರ್ , ರಾಕ್​​​ಲೈನ್ ವೆಂಕಟೇಶ್, ಶಿವರಾಜಕುಮಾರ್, ಯಶ್ ಮತ್ತು ದಿ ವಿಲನ್ ನಿರ್ಮಾಪಕ ಮನೋಹರ್ ಹಾಗೂ ಕೆಜಿಎಫ್​ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮನೆ ಮೇಲೆ ಐಟಿ ರೇಡ್​​​ ಮಾಡಲಾಗಿದೆ.

ಹೀಗಿರುವಾಗ ಸುದೀಪ್ ಮನೆಗೆ ಐಟಿ ರೇಡ್ ಆಗುತ್ತಿದ್ದಂತೆ ಮಂಡ್ಯ ಜಿಲ್ಲೆ ಪಾಂಡವಪುರ ಬಳಿ ಪೈಲ್ವಾನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ ಸುದೀಪ್ , ಶೂಟಿಂಗ್ ಅರ್ಧಕ್ಕೆ ಬಿಟ್ಟು ಬೆಂಗಳೂರಿನತ್ತ ದೌಡಾಯಿಸಿದ್ದರೂ, ಆದರೆ ಇದೀಗ ಸುದೀಪ್ ರವರಿಗೆ ಕೊಂಚ ನಿರಾಳವಾಗಿದ್ದು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಅಂತ್ಯಗೊಂಡಿದೆ ಎಂದು ತಿಳಿದು ಬಂದಿದೆ.

ಹೌದು, ಐಟಿ ಅಧಿಕಾರಿಗಳು ಸತತ 47 ಗಂಟೆಯವರೆಗೆ ಸುದೀಪ್ ಮನೆಯಲ್ಲಿ ಪರಿಶೀಲನೆ ನಡೆಸಿ ಇಂದು ಬೆಳಗಿನ ಜಾವ 5.30ಕ್ಕೆ ತೆರಳಿದ್ದಾರೆ. ಸುದೀಪ್ ಮನೆಯಿಂದ ಕೆಲವು ದಾಖಲೆಗಳು, ಕಾಗದ ಪತ್ರಗಳನ್ನು ಅಧಿಕಾರಿಗಳು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು ಅದರೊಂದಿಗೆ ಐಟಿ ಅಧಿಕಾರಿಗಳು ಸುದೀಪ್, ಅವರ ಪತ್ನಿ ಪ್ರಿಯಾ ಹಾಗೂ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದರೂ . ಅದಲ್ಲದೆ ಸುದೀಪ್ ಆದಾಯ ಮೂಲಗಳು, ಹೂಡಿಕೆಗಳು, ಬ್ಯಾಂಕ್ ವಹಿವಾಟು, ರಿಯಾಲಿಟಿ ಶೋಗಳ ಸಂಭಾವನೆ, ಚಿತ್ರಗಳ ಸಂಭಾವನೆ, ಚಿನ್ನಾಭರಣ ಸೇರಿ ಎಲ್ಲಾ ವಿಧಗಳಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಹಾಗಾದರೆ ಸುದೀಪ್ ಮನೆಯಲ್ಲಿ ಐಟಿ ರೇಡ್ ಮುಕ್ತಾಯವಾದರೂ ಇದ್ದಕಿದ್ದ ಹಾಗೆ ಮತ್ತೆ ಅಧಿಕಾರಿಗಳು ಅವರ ಮನೆಗೆ ದೌಡಹಿಸಿದ್ದು ಏಕೆ ಗೊತ್ತಾ?

ಸುದೀಪ್ ಮನೆಯ ಮೇಲಿನ ಐಟಿ ದಾಳಿ ಮುಕ್ತಾಯವಾಗಿದ್ದರೂ ಇಂದು ಮುಂಜಾನೆ ಮತ್ತೆ ಅಧಿಕಾರಿಗಳು ಸುದೀಪ್ ನಿವಾಸಕ್ಕೆ ಬಂದಿದ್ದರು . ಕೆಲವು ದಾಖಲೆಗಳಿಗೆ ಸಹಿ ಮಿಸ್ ಆಗಿದ್ದ ಕಾರಣ ಅಧಿಕಾರಿಗಳು ಪುನಃ ಸುದೀಪ್ ಅವರ ಮನೆಗೆ ಭೇಟಿ ನೀಡಿ ಸಹಿಯನ್ನು ಪಡೆದುಕೊಂಡರು ಎನ್ನಲಾಗಿದ್ದು . ಇಬ್ಬರು ಐಟಿ ಅಧಿಕಾರಿಗಳು ಬ್ಯಾಗ್ ಹಿಡಿದ ಮನೆ ಒಳಗಡೆ ಹೋಗಿ ಸಹಿ ಪಡೆದು ಹತ್ತೇ ನಿಮಿಷದಲ್ಲಿ ವಾಪಸ್ ಮರಳಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top