fbpx
ಸಮಾಚಾರ

ಕ್ರೀಡಾ ಸ್ಫೂರ್ತಿ ಮೆರೆದ ರಾಹುಲ್ – ಉತ್ತಮ ನಡೆಯಿಂದ ಹೃದಯ ಗೆದ್ದ ಕನ್ನಡಿಗ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯವನ್ನು ಅನುಭಿಸಿ ಕಳಪೆ ಫಾರ್ಮ್ ನಿಂದಾಗಿ ವ್ಯಾಪಕ ಟೀಕೆಗೆ ಒಳಗಾಗಿರಬಹುದು.. ಆದರೆ ಒಬ್ಬ ಕನ್ನಡಿಗನಾಗಿ ಕ್ರೀಡಾಸ್ಫೂರ್ತಿಯನ್ನು ಮೆರೆಯುವಲ್ಲಿ ಮಾತ್ರ ಹಿಂದೇಟು ಹಾಕಿಲ್ಲ.. ಹೌದು, ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಕೆ.ಎಲ್ಈ ರಾಹುಲ್ ಕ್ರೀಡಾ ಸ್ಫೂರ್ತಿ ಮೆರೆಯುವ ಮೂಲಕ ಸಮಸ್ತ ಕನ್ನಡ ಜನತೆಯ ಹೆಮ್ಮೆಯಾಗಿದ್ದಾರೆ.

ಅಂತಿಮ ಪಂದ್ಯದ ತೃತೀಯ ದಿನದಾಟದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿತ್ತು ಈ ವೇಳೆ ರವೀಂದ್ರ ಜಡೇಜಾ ಎಸೆದ 14ನೇ ಓವರ್‍ನಲ್ಲಿ ರಾಹುಲ್ ಡೈವ್ ಮಾಡಿ ಕ್ಯಾಚ್ ಪಡೆಕೊಂಡರು.. ಕ್ಯಾಚ್ ಪಡೆದಿದ್ದನ್ನು ಗಮನಿಸಿದ ಆಟಗಾರು ಸಂಭ್ರಮಿಸಿದ್ದರು, ಒಂದು ಕ್ಷಣ ಪರ್ಫೆಕ್ಟ್ ಕ್ಯಾಚ್‌ನಂತೆ ಭಾಸವಾಗುತ್ತಿತ್ತು ಆದರೆ ಈ ವೇಳೆ ಕ್ರೀಡಾ ಸ್ಫೂರ್ತಿ ಮೆರೆದ ರಾಹುಲ್ ಸರಿಯಾಗಿ ಕ್ಯಾಚ್ ಪಡೆಯಲಿಲ್ಲ ಎಂದು ಎಲ್ಲರಿಗೂ ಹೇಳಿ ಕ್ರೀಡಾ ಸ್ಫೂರ್ತಿ ಮೆರೆದರು. ಇದನ್ನು ಗಮನಿಸಿದ ಫೀಲ್ಡ್ ಅಂಪೈರ್‍ಗಳು ರಾಹುಲ್ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದರು.

ಪ್ರಸಕ್ತ ಸರಣಿಯಲ್ಲೇ ಅದಾಗಲೇ ಹಲವು ಕ್ಯಾಚ್‍ಗಳು ವಿವಾದಕ್ಕೀಡಾಗಿವೆ.. ವಿವಾದದ ನಡುವೆಯೂ ರಾಹುಲ್ ಕ್ರೀಡಾ ಸ್ಫೂರ್ತಿ ತೋರಿಸಿದ್ದು ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top