fbpx
ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರನಾ ಅಥವಾ ಯಜಮಾನನಾ? ಇಲ್ಲಿದೆ ನೋಡಿ ಉತ್ತರ !

ದಾಸನ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50 ನೇ ಚಿತ್ರಕ್ಕಾಗಿ ಬಕಪಕ್ಷಿಗಳಂತೆ ಕಾಯುತಿದ್ದು, ತಮ್ಮ ಮೆಚ್ಚಿನ ನಟ ತೆರೆಯೇ ಮೇಲೆ ಎಂದು ಮಿಂಚುವರೋ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಸದ್ಯಕ್ಕೆ ದರ್ಶನ್ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ವಿಪರೀತವಾಗಿ ಕಾಡುತಿದ್ದು, ಅದೇನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರನಾ ಅಥವಾ ಯಜಮಾನನಾ? ಎಂಬುದಾಗಿದೆ.

ಹೌದು, ಈ ಪ್ರಶ್ನೆಯ ಉತ್ತರಕ್ಕೆ ಅಭಿಮಾನಿಗಳು ಒಂಟಿ ಕಾಲಿನಲ್ಲಿ ನಿಂತು ಕಾಯುತಿದ್ದು ಸದ್ಯಕ್ಕೆ ದರ್ಶನ್ ರವರ ನಟನೆಯನ್ನು ತೆರೆಯ ಮೇಲೆ ನೋಡಿ ಕಣ್ಣುತುಂಬಿಕೊಳ್ಳುವ ಕಾತರದಲ್ಲಿದ್ದರೆ .

ಹೀಗಾಗಿ ಯಜಮಾನ ಮೊದಲು ಬರುತ್ತೋ ಅಥವಾ ಕುರುಕ್ಷೇತ್ರ ಮೊದಲು ಬರುತ್ತೋ ಅನ್ನುವ ಬಿಸಿ-ಬಿಸಿ ಚರ್ಚೆ ಅಭಿಮಾನಿಗಳಲ್ಲೇ ಶುರುವಾಗಿದೆ.

ಅದು ಅಲ್ಲದೆ ಕಳೆದ ವರ್ಷ ದರ್ಶನ್​ ನಟನೆಯ ಯಾವುದೇ ಚಿತ್ರಗಳು ತೆರೆಕಂಡಿಲ್ಲದೆ ಇರುವುದು ಅವರ ಅಭಿಮಾನಿಗಳಲ್ಲಿ ಬೇಸರತರಿಸಿದೆ. ‘ಕುರುಕ್ಷೇತ್ರ’ ಹಾಗೂ ‘ಯಜಮಾನ’ ಚಿತ್ರ 2018ರಲ್ಲೇ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತಾದರೂ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ವಿಳಂಬವಾಗಿದ್ದು ನಮಗೆಲ್ಲ ಗೊತ್ತೇ ಇದೆ. ಆದ್ದರಿಂದ ತಮ್ಮ ಸಿನಿಮಾವನ್ನು ಆದಷ್ಟು ಬೇಗ ರಿಲೀಸ್ ಮಾಡಿ ಅಭಿಮಾನಿಗಳನ್ನು ಖುಷಿ ಪಡಿಸಬೇಕೆಂದು ದರ್ಶನ್ ಬಯಸಿದ್ದಾರಂತೆ. ಒಟ್ಟಿನಲ್ಲಿ
ಈಗ ‘ಯಜಮಾನ’ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಚಿತ್ರತಂಡ ಶುರು ಮಾಡಿದೆ ಎಂದು ತಿಳಿದು ಬಂದಿದ್ದು ಆದ್ದರಿಂದ ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top