fbpx
ಸಮಾಚಾರ

ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದರ ಕುರಿತು ಅಸಮಾಧಾನ ಹೊರ ಹಾಕಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ

ಶ್ರೀ ಕ್ಷೇತ್ರ ‘ಶಬರಿಮಲೆ ಅಯ್ಯಪ್ಪ ಸ್ವಾಮಿ’ ಸನ್ನಿಧಿಗೆ ಮಹಿಳೆಯರು ಪ್ರವೇಶ ಮಾಡಬಹುದೆಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದ ಬೆನ್ನಲ್ಲೇ ಅನೇಕ ವಾದ-ವಿವಾದಗಳು ತೆಲೆಯಿತ್ತಿದವೂ.

ಕೆಲವರು ಮಹಿಳೆಯರು ದೇವಸ್ಥಾನಕ್ಕೆ ಹೋಗುವುದು ಉಚಿತವೆಂದರೆ ಇನ್ನೂ ಕೆಲವರು ಅನುಚಿತವೆಂದರೂ. ಆದರೆ ಈ ಎಲ್ಲದರ ನಡುವೆಯೂ ಬುಧವಾರ ಮುಂಜಾನೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಬ್ಬರೂ ಮಹಿಳೆಯರು ಪ್ರವೇಶಿಸಿ ದರ್ಶನ ಪಡೆದುಕೊಂಡಿದ್ದು ಸದ್ಯಕ್ಕೆ ಈ ವಿಚಾರ ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದು ಇದರ ಬಗ್ಗೆ ಖುದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವರು ಮಾತನಾಡಿದ್ದಾರೆ.

ಹೌದು, ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ.ಈ ಹಿಂದೆ ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಭಕ್ತಾಧಿಗಳು ಕ್ಷೇತ್ರಕ್ಕೆ ತೆರಳುತ್ತಿದ್ದರು .ಆದರೆ ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಶುರುವಾಗಿದೆ . ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು ಒಳ್ಳೆದಾಯಿತಲ್ಲ ಇದರಿಂದಾಗಿ ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ? ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top