fbpx
ಭವಿಷ್ಯ

05 ಜನವರಿ: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ಜನವರಿ ೦೫, ೨೦೧೯
ಸೂರ್ಯೋದಯ :೦೭:೧೬
ಸೂರ್ಯಾಸ್ತ :೧೮:೧೧

ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ – ೩೦:೫೮+ ವರೆಗೆ
ನಕ್ಷತ್ರ :ಮೂಲ – ೧೫:೦೮ ವರೆಗೆ
ಯೋಗ : ಧ್ರುವ – ೨೬:೧೩+ ವರೆಗೆ
ಸೂರ್ಯ ರಾಶಿ -ಧನು

ಅಭಿಜಿತ್ ಮುಹುರ್ತ :೧೨:೨೨ – ೧೩:೦೫
ಅಮೃತಕಾಲ : ೦೮:೦೮ – ೦೯:೫೩
ರಾಹು ಕಾಲ: ೧೦:೦೨ – ೧೧:೨೨
ಗುಳಿಕ ಕಾಲ: ೦೭:೨೦ – ೦೮:೪೧
ಯಮಗಂಡ:೧೪:೦೪ – ೧೫:೨೫

ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.

 

ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ.

 

ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ ಅದರೊಂದಿಗೆ ಸ್ನೇಹ ಸಂಪರ್ಕ ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷವುಂಟಾಗುವುದು.

 

ನಿಮ್ಮ ಬುದ್ಧಿವಂತಿಕೆ ಮತ್ತು ಶ್ರಮ ಗಮನಿಸಿ ಕೆಲವರು ನಿಮಗೆ ಧನ ಸಹಾಯ ಮಾಡಲು ಮುಂದಾಗುವರು. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ರಹದಾರಿ ಸಿಗುವುದು.

 

 

ಖರ್ಚು ವೆಚ್ಚಗಳ ಮೇಲೆ ಹತೋಟಿ ಸಾಧಿಸಿ. ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದ ಬೇಡ. ಹೊಸ ಯೋಜನೆಗಳ ಕುರಿತು ಚಿಂತಿಸುವ ನೀವು ಅದಕ್ಕೆ ತಗಲುವ ಹಣದ ವಿಷಯದಲ್ಲಿ ಹಿಂದೆ ಬೀಳುವಿರಿ.

 

 

ನೀವು ನಿಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಲೇಬೇಕು. ಕಾಲಕ್ಕೆ ತಕ್ಕ ಹೊಂದಾಣಿಕೆ ಬದುಕಿನಲ್ಲಿ ಅನಿವಾರ್ಯ. ಇಲ್ಲವಾದರೆ ಜನರ ಪರಿಹಾಸ್ಯಕ್ಕೆ ಗುರಿಯಾಗಬೇಕಾಗುವುದು. ಹಣಕಾಸಿನ ಪರಿಸ್ಥಿತಿ ಅಷ್ಟು ಉತ್ತಮವಾಗಿರುವುದಿಲ್ಲ.

 

 

 

ಪ್ರತಿಯೊಂದರಲ್ಲೂ ಯಶಸ್ಸು ಕಾಣಲು ಪರಿತಪಿಸುವ ನೀವು ಅದಕ್ಕಾಗಿ ಪಡುವ ಶ್ರಮ ಸಾಕಷ್ಟು ಇದೆ. ಆದರೆ ನೀವು ಅನುಸರಿಸುವ ರೀತಿಗಳು ಸರಿಯಾದ ಕ್ರಮದಲ್ಲಿವೆಯೆ ಎಂದು ಮೊದಲು ಪರಿಶೀಲಿಸಿ

 

 

ನಿಮ್ಮ ಛಲ, ಶ್ರದ್ಧೆ ಮತ್ತು ಕಠಿಣ ಪರಿಶ್ರಮಗಳು ನೀವು ನಡೆಸಿಕೊಂಡು ಹೋಗುತ್ತಿರುವ ವ್ಯವಹಾರದಲ್ಲಿ ಯಶಸ್ಸು ತಂದುಕೊಡಲಿವೆ.

ನೀವು ಒಂದು ಕಡೆ ಉಳಿತಾಯಕ್ಕೆ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಖರ್ಚು ಹೆಚ್ಚುತ್ತಾ ಹೋಗಲಿದೆ. ಅನೇಕ ಪ್ರಮುಖರು ನಿಮ್ಮನ್ನು ಭೇಟಿಯಾಗಲು ತಾವಾಗಿಯೇ ಹುಡುಕಿ ಬರಲಿದ್ದಾರೆ. ಮತ್ತೊಬ್ಬರ ಬಗ್ಗೆ ವ್ಯಕ್ತಿಗತವಾಗಿ ಮಾತನಾಡಬೇಡಿ.

 

 

ಈ ಹಿಂದೆ ನೀವು ಮನೆಯ ಸದಸ್ಯರೊಡನೆ ನಡೆದುಕೊಂಡ ರೀತಿಯಿಂದ ಕಳೆದು ಹೋಗಿದ್ದ ವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸಿ. ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ.

 

ಬಂಧು ಮಿತ್ರರೊಂದಿಗೆ ಆಡುವ ನಿಷ್ಠುರದ ಮಾತುಗಳು ಮತ್ತು ನಿಂದನೆಗಳು ಮುಂದೆ ನಿಮಗೇ ಕೆಟ್ಟ ಹೆಸರು ತರುತ್ತವೆ. ಈ ವಿಷಯದಲ್ಲಿ ಜಾಗರೂಕತೆಯಿಂದ ವರ್ತಿಸಿ.

 

ಎಂತಹ ತುರ್ತು ಕೆಲಸಗಳನ್ನು ಕೂಡಾ ಅವಸರ ಮಾಡದೆ ಸಂಯಮದಿಂದ ನಿರ್ವಹಿಸಿ. ಸಂಸಾರದಲ್ಲಿ ಮೂಡಿದ್ದ ಅನುಮಾನಗಳು ದೂರವಾಗಿ ಸಂತಸ ಮೂಡುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top