fbpx
ಸಮಾಚಾರ

ರಾತ್ರೋ ರಾತ್ರಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ!

ಶ್ರೀ ಕ್ಷೇತ್ರ ‘ಶಬರಿಮಲೆ ಅಯ್ಯಪ್ಪ ಸ್ವಾಮಿ‘ ಸನ್ನಿಧಿಗೆ ಮಹಿಳೆಯರು ಪ್ರವೇಶ ಮಾಡಬಹುದೆಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದ ಬೆನ್ನಲ್ಲೇ ಅನೇಕ ವಾದ-ವಿವಾದಗಳು ತೆಲೆಯಿತ್ತಿದವೂ.

ಕೆಲವರು ಮಹಿಳೆಯರು ದೇವಸ್ಥಾನಕ್ಕೆ ಹೋಗುವುದು ಉಚಿತವೆಂದರೆ ಇನ್ನೂ ಕೆಲವರು ಅನುಚಿತವೆಂದರೂ. ಆದರೆ ಈ ಎಲ್ಲದರ ನಡುವೆಯೂ ಬುಧವಾರ ಮುಂಜಾನೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಬ್ಬರೂ ಮಹಿಳೆಯರು ಪ್ರವೇಶಿಸಿ ದರ್ಶನ ಪಡೆದುಕೊಂಡಿದ್ದು ಸದ್ಯಕ್ಕೆ ಈ ವಿಚಾರ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಒಟ್ಟಿನಲ್ಲಿ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಹೋಗಕೂಡದು ಎಂಬುದರ ತೀವ್ರ ವಿರೋಧದ ಹಿನ್ನೆಲೆಯಲ್ಲೂ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಎಂಬುವರು ಬುಧವಾರ ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದು . ಈ ವಿಚಾರ ತಿಳಿದ ಬೆನ್ನಲ್ಲೇ ಇದೀಗ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ದೇಗುಲದಲ್ಲಿ ಶುದ್ದೀಕರಣ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ರಾತ್ರೋ ರಾತ್ರಿ ದೇವಾಲಯದೊಳಗೆ ಪ್ರವೇಶಿಸಿದ ಈ ಇಬ್ಬರೂ ಮಹಿಳೆಯಯರು ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತಿದ್ದು ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಯಾರು ಈ ಬಿಂದು ?

42 ವರ್ಷದ ಬಿಂದು, ಬಿಂದು ಓರ್ವ ದಲಿತ ಹಕ್ಕುಗಳಿಗಾಗಿ ಹೋರಾಡುವ ಹೋರಾಟಗಾರ್ತಿಯಾಗಿದ್ದು . ಈಕೆ ಥಲಸ್ಸರಿ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಲಿತ ಕುಟುಂಬಕ್ಕೆ ಸೇರಿದ ಬಿಂದು, ಆರಂಭದಲ್ಲಿ ಕಮ್ಯೂನಿಸ್ಟ್ ಪಕ್ಷದಲ್ಲಿ ಇದ್ದರೂ ಹಾಗೂ ಇದೇ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದ ಹರಿಹರನ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸ್ಪೋಟಗೊಂಡ ಹಿನ್ನೆಲೆಯಲ್ಲಿ ಹರಿಹರನ್ ಹಾಗೂ ಬಿಂದು ಇಬ್ಬರೂ 2010ರಲ್ಲಿ ರಾಜಕೀಯ ಪಕ್ಷ ತೊರೆದು, ಬೇರೆ ವೃತ್ತಿ ಮಾಡತೊಡಗಿದರು ಎಂಬ ಮಾಹಿತಿ ಲಭ್ಯವಾಗಿದೆ.

ಯಾರೂ ಈ ಕನಕದುರ್ಗ ?

ಅಯ್ಯಪ್ಪನ ಅಪ್ಪಟ ಭಕ್ತೆಯಾಗಿರುವ ಕನಕದುರ್ಗಾ ಮಲಪ್ಪುರಂ ನಿವಾಸಿಯಾದ ಕನಕದುರ್ಗಾ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮಹಿಳೆ. ಯಾವುದೇ ಹೋರಾಟಗಳಲ್ಲಿ ಗುರುತಿಸಿಕೊಳ್ಳದ ಈಕೆ, ಅಯ್ಯಪ್ಪನ ದರ್ಶನ ಪಡೆಯಬೇಕೆಂಬ ಅತೀವ ಆಶಯದಿಂದ ಶಬರಿಮಲೆಗೆ ಪ್ರವೇಶಿಸಿದ್ದರು. ಸರ್ಕಾರಿ ಕಚೇರಿಯಲ್ಲಿ ರೇಷನ್ ಸಪ್ಲೈಯರ್ ಆಗಿ ಕೆಲಸ ಮಾಡುವ ಈಕೆ, ತಾನು ಶಬರಿಮಲೆಗೆ ತೆರಳುತ್ತಿರುವ ವಿಚಾರವನ್ನು ಕುಟಂಬದ ಯಾವೊಬ್ಬ ಸದಸ್ಯನಿಗೂ ತಿಳಿಸಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಒಟ್ಟಿನಲ್ಲಿ ಈ ಇಬ್ಬರೂ ಈ ಮುಂಚೆಯೇ ಅಂದರೆ 2018 ಡಿಸೆಂಬರ್ 24ರಂದು ಇಬ್ಬರೂ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು ಆದರೆ ಅಂದು ಇವರು ದೇವಸ್ಥಾನವನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಆದರೆ ಈ ಸಾರಿ ಪಣ ತೊಟ್ಟು ಬಿಂದು ಹಾಗೂ ಕನಕದುರ್ಗಾ ಬುಧವಾರ ಮುಂಜಾನೆ ಸುಮಾರು 03.45ಕ್ಕೆ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆಯುವುದರ ಮೂಲಕ ಒಂದು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top