fbpx
ಸಮಾಚಾರ

ಜೀ ಕನ್ನಡಲ್ಲಿ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಗೆ ಎದುರಾಯ್ತು ಮಹಾ ಸಂಕಷ್ಟ!

ಜೀ ಕನ್ನಡ ಚಾನೆಲ್ ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ‘ಮಾದೇಶ್ವರ‘ ಸ್ವಾಮಿಯ ಭಕ್ತರಿಗೆ ಖುಷಿ ತಂದಿದ್ದು ಆದರೂ ಇದರ ನಡುವಲ್ಲೇ ಈ ಧಾರಾವಾಹಿ ಒಂದು ಮಹಾ ಸಂಕಷ್ಟಕ್ಕೆ ಗುರಿಯಾಗಿರುವುದು ವಿಷಾದನೀಯವೇ ಸರಿ.

ಹೌದು , ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯ ಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂಬ ಮಾತು ಕೆಲವು ಕಡೆಗಳಿಂದ ಕೇಳಿ ಬರುತ್ತಿದ್ದು, ಸಹಜವಾಗಿ ಇದು ಮಾದೇಶ್ವರ ಧಾರಾವಾಹಿಯ ತಂಡದ ಸದ್ಯಸರುಗಳಿಗೆ ಆತಂಕವನ್ನುಂಟು ಮಾಡಿದೆ.

ಅಷ್ಟಕ್ಕೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯ ಪ್ರಸಾರವನ್ನು ಏಕೆ ಸ್ಥಗಿತಗೊಳಿಸಬೇಕು ಎನ್ನಲಾಗುತ್ತಿದೆ ಗೊತ್ತೇ ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯ ಪ್ರಸಾರವನ್ನು ಸ್ಥಗಿತಗೊಳಿ ತಕ್ಷಣ ವಾಹಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಬಸವ ದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಸ್ವಾಮಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಇದರ ಹಿಂದೆ ಒಂದು ಬಲವಾದ ಕಾರಣವಿದೆ ಎಂದು ತಿಳಿದು ಬಂದಿದ್ದು. ಅದೇನೆಂದರೆ, ಮಾದೇಶ್ವರ ದೇವರು ಬಸವಣ್ಣನ ನಂತರ ಇಷ್ಟಲಿಂಗತತ್ವದ ಲಿಂಗಾಯತ ಧರ್ಮವನ್ನು ಬೆಳಕಿಗೆ ತಂದವರು ಹಾಗೂ ಮಾದೇಶ್ವರ ಬೆಟ್ಟದಲ್ಲಿ ಸೋಲಿಗರು, ಜೇನುಕುರುಬರು, ಬೇಡರಿಗೆ ಕೃಷಿ ಕಾಯಕ ಕಲಿಸಿ, ಉದ್ಯೋಗ, ಜಾತಿ, ಲಿಂಗ ಭೇದಗಳಿಲ್ಲದೇ ಅವರನ್ನು ಇಷ್ಟಲಿಂಗಾಧಾರಿಗಳನ್ನಾಗಿ ಮಾಡಿದರು. ಹೀಗಾಗಿ ಮಾದೇಶ್ವರರ ಕೊರಳಿನಲ್ಲಿ ಸದಾ ಇಷ್ಟಲಿಂಗವಿರುತ್ತಿತ್ತು. ಅವರ ಭಾವಚಿತ್ರಗಳಲ್ಲಂತೂ ಕೊರಳಲ್ಲಿ ಇಷ್ಟಲಿಂಗ, ಹಣೆಯಲ್ಲಿ ವಿಭೂತಿ ಇದ್ದೆ ಇರುತ್ತದೆ .ಆದರೆ ಹೀಗಿದ್ದರೂ ಸಹ ಮಾದೇಶ್ವರ ಧಾರಾವಾಹಿಯಲ್ಲಿ ಮಾದೇಶ್ವರ ಪಾತ್ರಧಾರಿಯೂ ಕೊರಳಲ್ಲಿ ಇಷ್ಟಲಿಂಗವನ್ನು ಧರಿಸಿಲ್ಲ ಹಾಗೂ ಮಾದೇಶ್ವರ ಪಾತ್ರಧಾರಿಯ ಹಣೆಗೆ ವಿಭೂತಿ ಜೊತೆಗೆ ಕುಂಕುಮ ಹಚ್ಚಲಾಗಿದೆ. ಈ ರೀತಿ ಮಾಡಿರುವುದು ಶರಣ ಸಂಸ್ಕೃತಿಗೆ ವಿರುದ್ಧವಾಗಿದ್ದು ಹೀಗಾಗಿ ಈ ಧಾರಾವಾಹಿಯ ನಿರ್ಲಕ್ಷ್ಯವನ್ನು ಬಸವ ದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಸ್ವಾಮಿ ಅವರು ದೂರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top