fbpx
ಮನೋರಂಜನೆ

“ರೇಡ್ ನಡೆದಿದ್ದು ಯಾಕೆ?” ಐಟಿ ಶಾಕ್ ಕೊಟ್ಟರೂ ಕೂಲ್ ಆಗಿಯೇ ಉತ್ತರ ಕೊಟ್ಟ ಕಿಚ್ಚಾ.

ಕನ್ನಡ ಚಿತ್ರರಂಗಕ್ಕೆ ಇಂದು ಬೆಳ್ಳಂಬೆಳಿಗ್ಗೆಯೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ತೆರಿಗೆ ಇಲಾಖೆ‌ ಅಧಿಕಾರಿಗಳು ಸ್ಯಾಂಡಲ್​​ವುಡ್​​​ನ ಹಲವು ನಟ, ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಿಚ್ಚಾ ಸುದೀಪ್, ಪುನೀತ್ ರಾಜ್‍ಕುಮಾರ್, ರಾಕ್​​​ಲೈನ್ ವೆಂಕಟೇಶ್, ಶಿವರಾಜಕುಮಾರ್, ಯಶ್ ಮತ್ತು ದಿ ವಿಲನ್ ನಿರ್ಮಾಪಕ ಮನೋಹರ್ ಹಾಗೂ ಕೆಜಿಎಫ್​ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮನೆ ಮೇಲೆ ಐಟಿ ರೇಡ್​​​ ನಡೆದಿದೆ. ಸುಮಾರು ಹತ್ತು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನೆ ಮೇಲಿನ ಐಟಿ ದಾಳಿ ವಿಷಯ ಗೊತ್ತಾಗುತ್ತಿದ್ದಂತೆ ಮಂಡ್ಯ ಜಿಲ್ಲೆ ಪಾಂಡವಪುರ ಬಳಿ ಪೈಲ್ವಾನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ ಸುದೀಪ್ , ಶೂಟಿಂಗ್ ಅರ್ಧಕ್ಕೆ ಬಿಟ್ಟು ಬೆಂಗಳೂರಿನತ್ತ ದೌಡಾಯಿಸಿದ್ದಾರೆ.

ನಿವಾಸದ ಬಳಿ ಇದ್ದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ವೈಯಕ್ತಿಕ ಕಾರಣದಿಂದ ಐಟಿ ದಾಳಿ ನಡೆದಿಲ್ಲ. ದಿ ವಿಲನ್, ಕೆಜಿಎಫ್ ಮತ್ತು ನಟಸಾರ್ವಭೌಮ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳಾಗಿದೆ. ಆದ್ದರಿಂದ ಮೂರು ಬಿಗ್ ಬಜೆಟ್ ಕಾರಣಕ್ಕೆ ಐಟಿ ದಾಳಿ ಮಾಡಿರಬಹುದು. ಈ ಮೂರು ಸಿನಿಮಾಗೆ ಸಂಬಂಧಿಸಿದ ನಿರ್ಮಾಪಕರ ಮನೆ ಮೇಲೂ ಐಟಿ ರೇಡ್ ಆಗಿದೆ ಎಂದು ಹೇಳಿದ್ದಾರೆ.

ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹಾಗಾಗಿ ಭಯ ಪಡಬೇಕಾದ ಅಗತ್ಯವಿಲ್ಲ. ಆದಾಯ ಇಲಾಖೆ ಅಧಿಕಾರಿಗಳು ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಐಟಿ ಇಲಾಖೆ ಯಾವ ಪಕ್ಷಕ್ಕೂ ಸಂಬಂಧಪಟ್ಟಿದ್ದಲ್ಲ. ಅದಕ್ಕೆ ಅದರದ್ದೇ ನಿಯಮಗಳು ಇರುತ್ತೆ. ಅದು ಫಾಲೋ ಆಗಿಲ್ಲ ಅಂತ ಮಾಹಿತಿ ಬಂದಾಗ ದಾಳಿ ನಡೆಯುತ್ತೆ. ಅದಕ್ಕೆ ನಾವು ಸಹಕರಿಸಬೇಕು.

ಮನೆಯಲ್ಲಿ ನಮ್ಮ ತಾಯಿ ಒಬ್ಬರೆ ಇದ್ದಾರೆ,. ಅವರಿಗೆ 70 ವರ್ಷಕ್ಕಿಂತ ಹೆಚ್ಚಾಗಿದೆ. ಅದಕ್ಕಾಗಿ ನಾನು ಮನೆಗೆ ಬಂದಿದ್ದೇನೆ. ಇಲ್ಲ ಅಂದಿದ್ದರೆ ನಾನು ಅಲ್ಲೆ ಕುಳಿತುಕೊಂಡು ಇದೆಲ್ಲವನ್ನು ನಿಭಾಯಿಸಬಹುದಿತ್ತು ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top