fbpx
ಸಮಾಚಾರ

‘ವಿದ್ಯೆಯ ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ ‘ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಹಿತಿ ಎಸ್‌.ಎಲ್‌.ಭೈರಪ್ಪ

ಎಸ ಎಲ್ ಭೈರಪ್ಪನವರು ತಮ್ಮ ನಿವಾಸದಲ್ಲಿ ಸಿಪಿಕೆ ಅವರ ಪುಸ್ತಕ ಬಿಡುಗಡೆ ಮಾಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಜಾರಿಗೊಳಿಸಲು ಮುಂದಾಗಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು.

ಖಾಸಗಿಯವರು ಇಂಗ್ಲಿಷ್‌ ಮೀಡಿಯಂ ಬ್ಯುಸಿನೆಸ್‌ ಮಾಡಿಕೊಂಡರೆ, ಅವರ ಲಹರಿಗೆ ಇವರು ಸಿಲುಕಿಕೊಂಡಿದ್ದಾರೆ ಎಂದು ಭೈರಪ್ಪನವರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರೂ.

ಸಮಾಜದಲ್ಲಿರುವಂತಹ, ಮನೆಯಲ್ಲಿರುವಂತಹ ಭಾಷೆ ಮೂಲಕ ಒಂದು ಮಟ್ಟಕ್ಕೆ ಹೋಗಬೇಕು. ಆ ಮೇಲೆ ಬೇರೆ ಭಾಷೆ ಕಲಿಯುವುದು. ಆರಂಭದಲ್ಲೇ ಇಂಗ್ಲಿಷ್‌ ಮಾಧ್ಯಮ ಮಾಡುತ್ತೇನೆ ಎಂದರೆ ಅದಕ್ಕೆ ಏನರ್ಥ ಎಂದು ಪ್ರಶ್ನಿಸಿದರು? ಅಷ್ಟೇ ಅಲ್ಲದೆ , ವಿಶ್ವವಿದ್ಯಾನಿಲಯದಲ್ಲಿ, ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರನ್ನು ಸಂಬಳಕ್ಕೋಸ್ಕರ ನೇಮಕ ಮಾಡಿಕೊಳ್ಳಬಾರದು. ವಿದ್ಯಾಭ್ಯಾಸ ಏನೆಂಬ ಪರಿಜ್ಞಾನವಿರುವ ಶಿಕ್ಷಕರನ್ನು ನೇಮಿಸಬೇಕು. ಎಲ್ಲರಿಗೂ ಮೇಷ್ಟರಾಗುವ ಯೋಗ್ಯತೆ ಇರುವುದಿಲ್ಲ. ಜಾಸ್ತಿ ಸಂಬಳಕ್ಕೆ ಬರುವವನು ಶಿಕ್ಷಕನಾಗುವುದಿಲ್ಲ. ನಿವೃತ್ತಿಯ ನಂತರವೂ ವಿದ್ಯೆಯಿಂದ ಸಂಪಾದನೆ ಮಾಡುವವನು ಶಿಕ್ಷಕನಾಗುತ್ತಾನೆ. ಆತ ಒಳ್ಳೆಯ ಶಿಕ್ಷಕನೂ ಆಗುತ್ತಾನೆ ಎಂದರು.

ಹಾಗೂ ಕೊನೆಯದಾಗಿ ವಿದ್ಯೆಯ ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಹಿತಿ ಎಸ್‌.ಎಲ್‌.ಭೈರಪ್ಪ, ನವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಹೊರಟಿರುವವರನ್ನು ಸ್ಟುಪಿಡ್ ಎಂದು ಕರೆದು ತಮ್ಮ ಅಸಮಾಧಾನವನ್ನು ಹೊರ ಹಾಕಿದರೂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top