fbpx
ಸಮಾಚಾರ

ಗೃಹಬಂಧನಕ್ಕೆ ಒಳಗಾದ ಪ್ರೊ.ಕೆ.ಎಸ್ ಭಗವಾನ್ ? – ಕೊನೆಗೂ ವಿವಾದಾತ್ಮಕ ಹೇಳಿಕೆಗಳಿಗೆ ಬಿತ್ತು ಫುಲ್ ಸ್ಟಾಪ್.

ಸದಾ ಒಂದಲ್ಲ ಒಂದು ವಿವಾದಗಳನ್ನು ತನ್ನ ಮೇಲೆ ಹಾಕಿಕೊಳ್ಳುವ ಪ್ರೊ.ಕೆ.ಎಸ್.ಭಗವಾನ್ ತಿರುಳಿಲ್ಲದ ಹಾಗೂ ಹಿಂದೂ ಭಾವನೆಗಳಿಗೆ ದಕ್ಕೆ ತರುವ ಹೇಳಿಕೆಗಳನ್ನು ನೀಡಿ ಎಲ್ಲರ ಕೆಂಗೆಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ.

ಹೀಗಾಗಿ ಪ್ರೊ.ಕೆ.ಎಸ್.ಭಗವಾನ್ ರವರ ತಲೆಬುಡವಿಲ್ಲದ ಹೇಳಿಕೆಗಳನ್ನು ಕಂಡ ಜನರು ಕೋಪೋದ್ರಿಕ್ತರಾಗಿದ್ದು, ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತ ಜಗದೀಶ್​ ಹೆಬ್ಬಾಳ ಅವರು ಭಗವಾನ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನುವ ವಿಚಾರ ಇದೀಗ ಎಲ್ಲರಿಗೂ ಗೊತ್ತಾಗಿದೆ.

ಹೀಗಾಗಿ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತ ಜಗದೀಶ್​ ಹೆಬ್ಬಾಳ ಅವರು ಭಗವಾನ್ ವಿರುದ್ಧ ದಾಖಲು ಮಾಡಿದ ದೂರಿನ ಪ್ರಕಾರ ಪೋಲಿಸಿನವರು ಪ್ರೊ.ಕೆ.ಎಸ್.ಭಗವಾನ್ ರವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಹೀಗೆ ರಾಜ್ಯದ ಎಲ್ಲಾ ಮೂಲೆಯಿಂದ ಜನರು ಪ್ರೊ.ಕೆ.ಎಸ್.ಭಗವಾನ್ ರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರಣದಿಂದಾಗಿ ಪೊಲೀಸರು ಇದೀಗ ‘ರಾಮಮಂದಿರ ಯಾಕೆ ಬೇಕು’ ಎಂಬ ಪುಸ್ತಕದ ಮೂಲಕ ಮತ್ತೆ ವಿವಾದ ಎಬ್ಬಿಸಿರುವ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ರವರನ್ನು ಗೃಹ ಬಂಧನದಲ್ಲಿರಿಸಿದ್ದಾರೆ ಎನ್ನಲಾಗಿದ್ದು ಜೊತೆಗೆ ಪೊಲೀಸರು ಭಗವಾನ್​ರಿಗೆ ಸದ್ಯ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದೇನು ?

“ನಾನು ಏನೂ ಹೇಳಿಲ್ಲ, ಭಾರತೀಯ ಪ್ರಜೆಯಾಗಿ ನನ್ನ ಕರ್ತವ್ಯ ಮಾಡಿದ್ದೆ. ಐಪಿಸಿ 51 ಎ.ಹೆಚ್ ಅಡಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ವಿಚಾರವಾದ, ವೈಜ್ಞಾನಿಕ ಮನೋಭಾವ ಅಭಿವೃದ್ಧಿ, ಸುಧಾರಣೆ ಮಾಡೋದು ನನ್ನ ಕರ್ತವ್ಯ. ನನ್ನ ವಿರುದ್ಧ ಹಲವು ಠಾಣೆಗಳಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ. ನಾನು ಯಾವುದೇ ದೂರು ಕೊಟ್ಟಿಲ್ಲ, ಮೌಖಿಕವಾಗಿಯೂ ಯಾರ ಬಳಿಯೂ ಮನವಿ ಮಾಡಿಲ್ಲ. ನಾನು ಸಂವಿಧಾನ ಬದ್ಧವಾಗಿ ನನ್ನ ಕೆಲಸ ಮಾಡಿದ್ದೇನೆ. ಹಾಗಾಗಿ ನಾನು ದೂರು ನೀಡುವ ಅವಶ್ಯಕತೆಯೇ ಇಲ್ಲ ” ಎಂದು ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top