fbpx
ಸಮಾಚಾರ

ಕಾಲೇಜು ಹುಡುಗಿಯರನ್ನು ಚುಡಾಯಿಸೋರನ್ನ ಒದ್ದು ಒಳಗೆ ಹಾಕಿ ಎಂದು ಪೊಲೀಸರಿಗೆ ಸೂಚನೆ ಕೊಟ್ಟ ಸಚಿವ ರೇವಣ್ಣ

ನಿನ್ನೆ ಹಾಸನದ ಜಿಲ್ಲಾ ಸಭಾಂಗಣದಲ್ಲಿ ಶಾಲಾ-ಕಾಲೇಜು ಮುಖ್ಯಸ್ಥರೊಂದಿಗೆ ಸಭೆ ಸಚಿವರು ಚರ್ಚೆ ನಡೆಸಿದ ಸಚಿವ ರೇವಣ್ಣ ರವರು ಶಾಲಾ-ಕಾಲೇಜು ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಮತ್ತು ಅವುಗಳ ಅಭಿವೃದ್ಧಿಗಳ ಬಗ್ಗೆ ಮಾತನಾಡಿದರು ಹಾಗೂ ವಿವರವಾಗಿ ಚರ್ಚಿಸಿದರೂ ಕೂಡ.

ಹೀಗೆ ಸಭೆಯ ನಡುವಲ್ಲಿ ಕಾಲೇಜಿನ ಮುಖ್ಯೋಪಾಧ್ಯಾಯರೊಬ್ಬರು ತಮ್ಮ ಕಾಲೇಜು ಆವರಣದಲ್ಲಿ ಮದ್ಯಪಾನ ಮಾಡಿ, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪುಂಡರ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಮುಖ್ಯೋಪಾಧ್ಯಾಯರ ಈ ಮಾತನ್ನು ಕೇಳಿ ಕೋಪಗೊಂಡ ಸಚಿವ ರೇವಣ್ಣ ರವರು ಕಾಲೇಜು ಆವರಣದಲ್ಲಿ ಮದ್ಯಪಾನ ಮಾಡುವ ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕಿಡಿಗೇಡಿಗಳನ್ನು ಒದ್ದು ಒಳಗೆ ಹಾಕಿ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರಕಾಶ್ ಗೌಡ ಅವರಿಗೆ ಸೂಚನೆ ನೀಡಿದ್ದಲ್ಲದೆ ಇಂತಹ ವಿಚಾರದಲ್ಲಿ ಯಾರೇ ಆಗಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡುವುದು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಿ, ಅದ್ಯಾವನ್ ಬರ್ತಾನೆ ? ನಾನು ನೋಡ್ತಿನಿ. 15 ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿ ಎಂದು ತಮ್ಮದೇ ಶೈಲಿಯಲ್ಲಿ ಪೊಲೀಸರಿಗೇ ಆಜ್ಞಾಪಿಸಿದರೂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top